ಏಮ್ಸ್ ನಿಂದ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಏನಿದೆ?
ನವದೆಹಲಿ, ಆಗಸ್ಟ್ 16: ಜೂನ್ ಹನ್ನೊಂದನೇ ತಾರೀಕು ಕಿಡ್ನಿ ಸೋಂಕು ಮತ್ತಿತರ ಆರೋಗ್ಯ ಸಮಸ್ಯೆಯಿಂದ ದೆಹಲಿಯ ಏಮ್ಸ್ ಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹಾಗೂ ಭಾರತರತ್ನ 93 ವರ್ಷ ವಯಸ್ಸಿನ ಅಟಲ್ ಬಿಹಾರಿ ವಾಜಪೇಯಿ ಆಗಸ್ಟ್ 16ರಂದು ಸಂಜೆ 5.05ಕ್ಕೆ ನಿಧನರಾಗಿದ್ದಾರೆ.
ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ.
16.08.2018ರ ಸಂಜೆ 5.05ಕ್ಕೆ ಭಾರತದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ಬಗ್ಗೆ ತಿಳಿಸಲು ವಿಷಾದಿಸುತ್ತೇವೆ. ಶ್ರೀ ವಾಜಪೇಯಿ ಅವರು 11.06.2018ರಂದು ಏಮ್ಸ್ ಗೆ ದಾಖಲಾಗಿದ್ದರು. ಕಳೆದ ಒಂಬತ್ತು ವಾರಗಳಿಂದ ಏಮ್ಸ್ ವೈದ್ಯರ ತಂಡದ ನಿಗಾದಲ್ಲಿದ್ದರು.

ದುರದೃಷ್ಟ ಅಂದರೆ, ಕಳೆದ ಮೂವತ್ತಾರು ಗಂಟೆಯಿಂದ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಬಂತು ಮತ್ತು ಅವರನ್ನು ಜೀವರಕ್ಷಕ ವ್ಯವಸ್ಥೆ ಅಡಿ ಇರಿಸಲಾಗಿತ್ತು. ಎಲ್ಲ ಉತ್ತಮ ಪ್ರಯತ್ನಗಳ ನಂತರವೂ ಇಂದು ಅವರನ್ನು ಕಳೆದುಕೊಂಡಿದ್ದೇವೆ.
ಈ ಅತಿ ದೊಡ್ಡ ನಷ್ಟದ ದುಃಖದಲ್ಲಿರುವ ದೇಶದ ಜನರ ಜತೆಗೆ ನಾವೂ ಭಾಗಿಯಾಗಿದ್ದೇವೆ.
Former Prime Minister & Bharat Ratna #AtalBihariVaajpayee passes away in AIIMS. He was 93. pic.twitter.com/r12aIPF5G0
— ANI (@ANI) 16 August 2018












Click it and Unblock the Notifications