ವಿಡಿಯೋ: ಓಂ ಸ್ವಾಮಿಗೆ ಸಾರ್ವಜನಿಕರಿಂದ ಸಕತ್ ಗೂಸಾ
ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದ ವಿವಾದಿತ ಸ್ವಾಮೀಜಿ ಓಂ ಸ್ವಾಮಿ ಅವರಿಗೆ ಸಾರ್ಜವನಿಕರಿಂದ ಸಕತ್ತಾಗಿ ಧರ್ಮದೇಟು ಬಿದ್ದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ನವದೆಹಲಿ, ಮೇ 21: ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದ ವಿವಾದಿತ ಸ್ವಾಮೀಜಿ ಓಂ ಸ್ವಾಮಿ ಮತ್ತೆ ಬೇಡದ ವಿಷ್ಯ ಸುದ್ದಿಯಾಗಿದ್ದಾರೆ. ಕಾರ್ಯಕ್ರಮವೊಂದಕ್ಕೆ ಬಂದಿದ್ದ ಓಂ ಸ್ವಾಮಿಗೆ ಸಾರ್ವಜನಿಕರು ಸಕತ್ತಾಗಿ ಧರ್ಮದೇಟು ಬಿದ್ದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಎಬಿವಿ ಲೈವ್ ವರದಿಯಂತೆ, ಇತ್ತೀಚೆಗೆ ದೆಹಲಿಯ ವಿಕಾಸ್ ನಗರದಲ್ಲಿ ನಾಥುರಾಮ್ ಗೋಡ್ಸೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಬಂದ ಓಂ ಸ್ವಾಮಿಗೆ ಹಿಗ್ಗಾ ಮುಗ್ಗಾ ಥಳಿಸಲಾಯಿತು.

ಯಾರು ಯಾಕೆ ಹೊಡೆಯುತ್ತಿದ್ದಾರೆ ಎಂಬುದು ಅರಿವಾಗದೆ ಕಕ್ಕಾಬಿಕ್ಕಿಯಾದ ಓಂ ಸ್ವಾಮಿ, ತಲೆಯ ಮೇಲಿಂದ ಬಿದ್ದ ವಿಗ್ ಎತ್ತಿಕೊಂಡು ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ್ದಾರೆ.
ಈ ಹಿಂದೆ ಟಿವಿ ಶೋವೊಂದರಲ್ಲಿ ಕೂಡಾ ಓಂ ಸ್ವಾಮಿ ಅವರು ಮಹಿಳೆಯೊಬ್ಬರ ಜತೆ ಕೈ ಕೈ ಮಿಲಾಯಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಧರ್ಮ, ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತಿದ್ದ ಓಂ ಸ್ವಾಮಿ ಇತ್ತೀಚೆಗೆ ಅರೆ ನಗ್ನ ಯುವತಿ ಜತೆ ಯೋಗ, ಧ್ಯಾನ ಎಂದೆಲ್ಲ ವಿಡಿಯೋ ಮಾಡಿ ಇಂಟರ್ನೆಟ್ ಗೆ ಬಿಟ್ಟಿದ್ದು ಸಾರ್ವಜನಿಕರನ್ನು ಕೆರಳಿಸಿತ್ತು.












Click it and Unblock the Notifications