ಕೊರೊನಾ ವಾರಿಯರ್‌ಗೆ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಭರ್ಜರಿ ಸ್ವಾಗತ

ದೆಹಲಿ, ಏಪ್ರಿಲ್ 30: ತಮ್ಮ ಪ್ರಾಣವನ್ನು ಲೆಕ್ಕಿಸಿದೆ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಇನ್ನಿತರ ಆರೋಗ್ಯ ಸಿಬ್ಬಂದಿಗಳನ್ನು ಗೌರವಿಸುವ ಸಮಯ ಇದು. ಕೊರೊನಾ ವಾರಿಯರ್ಸ್‌ಗೆ ಧನ್ಯವಾದ ಹೇಳುವ ಸಲುವಾಗಿ, ಪ್ರಧಾನಿ ಮೋದಿ ಅವರು ಚಪ್ಪಾಳೆ ಹೊಡೆಯಲು ಹೇಳಿದ್ದರು. ನಂತರ ದೀಪ ಬೆಳಗಲು ಸೂಚಿಸಿದ್ದರು.

ಇದನ್ನು ಮೀರಿದ ಗೌರವವನ್ನು ಅವರಿಗೆ ನೀಡಬೇಕಾದದ್ದು ಸಾರ್ವಜನಿಕರ ಕರ್ತವ್ಯ. ಇಂತಹ ಒಂದು ಸನ್ನಿವೇಶ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಕಾರಣಕ್ಕಾಗಿ, ಅದೇಷ್ಟೊ ವೈದ್ಯರು ಹಲವು ದಿನಗಳ ಕಾಲ ಮನೆಗೆ ಹೋಗಿಲ್ಲ. ಮನೆ ಬಳಿ ಹೋದರು ಪತ್ನಿ, ಗಂಡ ಹಾಗೂ ಮಕ್ಕಳ ಜೊತೆ ಸಮಯ ಕಳೆಯಲಿಲ್ಲ. ದೂರದಲ್ಲಿ ನಿಂತು ಭಾವುಕರಾಗಿ ಹಿಂತಿರುಗಿರುವ ಘಟನೆಗಳು ವರದಿಯಾಗಿದೆ.

Medical Staff Honoured By Her Apartment Folks

ಇದೀಗ, ಕೊರೊನಾ ರೋಗಿಗಳು ಇದ್ದ ಐಸಿಯು ವಾರ್ಡ್‌ನಲ್ಲಿ ಸತತ 20 ದಿನಗಳ ಕಾಲ ಕೆಲಸ ಮಾಡಿದ್ದ ಮನೆಗೆ ವಾಪಸ್ ಬಂದ ಸಿಬ್ಬಂದಿಗೆ ಆಕೆಯ ಕುಟುಂಬ ಹಾಗೂ ಅಪಾರ್ಟ್‌ಮೆಂಟ್‌ ನಿವಾಸಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ.

ಅಪಾರ್ಟ್‌ಮೆಂಟ್ ಬಳಿ ಬರುತ್ತಿದ್ದಂತೆ ಆಕೆಯ ಮೇಲೆ ಹೂವು ಎಸೆದು ಗೌರವ ಸಲ್ಲಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಟದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕಾರಣಕ್ಕೆ, ಆ ವೈದ್ಯಕೀಯ ಸಿಬ್ಬಂದಿಗೆ ಇಡೀ ಅಪಾರ್ಟ್‌ಮೆಂಟ್‌ ನಿವಾಸಿಗಳು ಚಪ್ಪಾಳೆ ಹೊಡೆದು, ಹೂವಿನ ಅಭಿಷೇಕ ಮಾಡಿ ಬರಮಾಡಿಕೊಂಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೂ ಮುಂಚೆ ಆಶಾ ಕಾರ್ಯಕರ್ತರು, ಬಿಬಿಎಂಪಿ ಇಲಾಖೆ ಸ್ವಚ್ಚತಾ ಸಿಬ್ಬಂದಿ ಹಾಗೂ ಕಸ ತೆಗೆದುಕೊಂಡು ಹೋಗುವ ಸಿಬ್ಬಂದಿಗಳಿಗೆ ಇಂತಹ ಗೌರವ ನೀಡಿದ ಉದಾಹರಣೆಗಳು ನಮ್ಮ ಮುಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+