ಏಮ್ಸ್ ಆಸ್ಪತ್ರೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ
ನವದೆಹಲಿ, ಆಗಸ್ಟ್ 16: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಉಪರಾಷ್ಟ್ರಪತಿ ವೆಂಕಯ್ಯ್ ನಾಯ್ಡು ಅವರು ಇಂದು(ಆ.16) ಬೆಳಿಗ್ಗೆ ಭೇಟಿಯಾದರು.
ಗಂಭೀರ ಸ್ಥಿತಿಯಲ್ಲಿರುವ 93 ವರ್ಷದ ವಾಜಪೇಯಿ ಅವರಿಗೆ ಜೀವ ರಕ್ಷಕಗಳನ್ನು ಒದಗಿಸಲಾಗಿದ್ದು, ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ.
ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೆಂಕಯ್ಯ ನಾಯ್ಡು ಅವರು, ವಾಜಪೇಯಿ ಅವರ ಆರೋಗ್ಯದ ಕುರಿತು ಏಮ್ಸ್ ವೈದ್ಯರಲ್ಲಿ ಮಾಹಿತಿ ಕಲೆಹಾಕಿದರು.

ಮೂತ್ರಪಿಂಡ ಸೋಂಕಿನಿಂದ ಜೂನ್ 11 ರಂದು ಆಸ್ಪತ್ರೆಗೆ ದಾಖಲಾದ ವಾಜಪೇಯಿ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ಅವರಿಗೆ ಜೀವ ರಕ್ಷಕಗಳನ್ನು ಒದಗಿಸಲಾಗಿದೆ.
ಮಧುಮೇಹದಿಂದ ಬಳಲುತ್ತಿರುವ ಅವರ ಒಂದೇ ಮೂತ್ರಪಿಂಡ ಕಾರ್ಯನಿರ್ವಹಿಸುತ್ತಿದೆ. 2009 ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಅವರು ಅಂದಿನಿಂದ ಯಾರನ್ನೂ ಗುರುತಿಸಲಾಗದ ಸ್ಥಿತಿಗೆ ತಲುಪಿದ್ದಾರೆ.












Click it and Unblock the Notifications