ಉತ್ತರ ಭಾರತವನ್ನು ನಡುಗಿಸಿದ ಭೂಕಂಪದ ವೈರಲ್ ವಿಡಿಯೋ

ನವದೆಹಲಿ, ಸೆಪ್ಟೆಂಬರ್ 23: ಉತ್ತರ ಭಾರತದ ಕೆಲವು ರಾಜ್ಯಗಳನ್ನು ನಡುಗಿಸಿದ ಪ್ರಬಲ ಭೂಕಂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಮತ್ತು ಉತ್ತರ ಭಾರತವನ್ನು ನಡುಗಿಸಿದ ಈ ಭೂಕಂಪದಲ್ಲಿ ಇದುವರೆಗೆ ಸುಮಾರು 19 ಮಂದಿ ಮೃತರಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ದೆಹಲಿ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವೆಡೆ, ಮತ್ತು ನೆರೆಯ ಪಾಕಿಸ್ತಾನದ ಕೆಲವೆಡೆ ಪ್ರಬಲ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪನದಲ್ಲಿ 6.1 ತೀವ್ರತೆ ದಾಖಲಾಗಿತ್ತು. ಘಟನೆಯಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಭೂಕಂಪದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲಲ್ಲಿ ವೈರಲ್ ಆಗಿದ್ದು, ಭೂಕಂಪದ ತೀವ್ರತೆಗೆ ಸಾಕ್ಷ್ಯವಾಗಿದೆ.

ರಸ್ತೆಯೇ ಬಾಯ್ತೆರೆದು...

ಭೂಕಂಪದಿಂದಾಗಿ ರಸ್ತೆಯೇ ಬಾಯತೆರೆದು, ವಾಹನಗಳು ಜಖಂ ಗೊಂಡ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಸಿಯುತ್ತಿರುವ ಮಾಲ್ ನ ಮಹಡಿ!

ಪಾಕಿಸ್ತಾನದ ಕರಾಚಿಯಲ್ಲಿ ಮಾಲ್ ವೊಂದರ ಮಹಡಿ ಕುಸಿದ ದೃಶ್ಯವೂ ವೈರಲ್ ಆಗಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

ರಸ್ತೆಯಲ್ಲೇ ಮಗುಚಿಬಿದ್ದ ಬಸ್ ಗಳು

ಇದ್ದಕ್ಕಿದ್ದಂತೇ ರಸ್ತೆ ಕುಸಿದಿದ್ದರಿಂದ ಬಸ್ ಗಳು ರಸ್ತೆಯಲ್ಲೇ ಮಕಾಡೆ ಮಲಗಿದ ದೃಶ್ಯ ಪಾಕಿಸ್ತಾನದಲ್ಲಿ ಮತ್ತು ಭಾರತದ ಕಾಶ್ಮೀರದಲ್ಲಿ ಕಂಡುಬಂತು.

ಮೀರ್ ಪುರದ ಭೀಕರ ಚಿತ್ರಗಳು

ಭೂಕಂಪದಿಂದ ಮೀರ್ ಪುರದಲ್ಲಾದ ಹಾನಿಯ ಭೀಕರ ಚಿತ್ರಗಳಿ ಸಹ ವೈರಲ್ ಆಗಿದ್ದು, ಹೆದ್ದಾರಿಗಳೇ ಭೂಕಂಪದ ತೀವ್ರತೆಗೆ ಕುಸಿದು ಬಿದ್ದಿರುವ ದೃಶ್ಯ ಭಯ ಮೂಡಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+