ಕಾರಿನ ಗ್ಲಾಸ್ ಒರೆಸಿದ ಪ್ರಿಯಾಂಕಾ ಗಾಂಧಿ ವಿಡಿಯೋ ವೈರಲ್

ನವದೆಹಲಿ, ಫೆಬ್ರುವರಿ 04: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಕಾರಿನ ವಿಂಡ್ ಶೀಲ್ಡ್ ಒರೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ನಡೆದ ಗಲಭೆಯಲ್ಲಿ ಸಾವನ್ನಪ್ಪಿದ್ದ ನವರೀತ್ ಸಿಂಗ್ ಎಂಬ ರೈತನ ಕುಟುಂಬವನ್ನು ಭೇಟಿ ಮಾಡಲು ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ರಾಂಪುರಕ್ಕೆ ಇಂದು ಮುಂಜಾನೆ ತೆರಳುತ್ತಿದ್ದರು. ಈ ಸಂದರ್ಭ ಅವರ ಬೆಂಗಾವಲಿಗಿದ್ದ ನಾಲ್ಕು ಕಾರುಗಳು ದಾರಿ ಸರಿಯಾಗಿ ಕಾಣದೇ ಉತ್ತರ ಪ್ರದೇಶದ ಹಾಪುರ ರಸ್ತೆಯಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿವೆ.

 Video Of Priyanka Gandhi Cleaning Car Glass Viral Online

ಪ್ರಿಯಾಂಕಾ ಗಾಂಧಿ ಇದ್ದ ಕಾರಿನ ಚಾಲಕ ಸರಿಯಾಗಿ ರಸ್ತೆ ಕಾಣದೇ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದು, ಡಿಕ್ಕಿಯಾಗಿದೆ. ತಕ್ಷಣವೇ ಗಾಡಿ ನಿಲ್ಲಿಸಿ ಕೆಳಗಿಳಿದಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಈ ಸಂದರ್ಭ ಕಾರಿನಿಂದ ಇಳಿದ ಪ್ರಿಯಾಂಕಾ ಗಾಂಧಿ ತಾವೇ ಕಾರಿನ ವಿಂಡ್ ಶೀಲ್ಡ್ ಒರೆಸಿದ್ದಾರೆ. ಅವರು ಗಾಜು ಒರೆಸುತ್ತಿದ್ದ ಈ ವಿಡಿಯೋ ಇದೀಗ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಹಲವು ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+