ಅತ್ಯಾಚಾರ ಆರೋಪಕ್ಕೆ ಬೇಸತ್ತು ಆತ್ಮಹತ್ಯೆ

 Upset over rape allegations Delhi NGO Director Anwar commits suicide
ನವದೆಹಲಿ, ಡಿ.20: ಛೇ! ವಿನಾಕಾರಣ ತನ್ನ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದಕ್ಕೆ ಬೇಸತ್ತು ಉನ್ನತಮಟ್ಟದ ಅಧಿಕಾರಿಯೊಬ್ಬರು ಮೂರನೆಯ ಮಹಡಿಯಿಂದ ಹಾರಿ ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೆಹಲಿಯ ಸರಕಾರೇತರ ಸಂಸ್ಥೆಯೊಂದರ (Institute for Social Democracy NGO) ನಿರ್ದೇಶಕ ಖುರ್ಷಿದ್ ಅನ್ವರ್ ಅವರು ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಾನವ ಹಕ್ಕುಗಳ ಯುವ ಕಾರ್ಯಕರ್ತೆಯೊಬ್ಬರು ಆಪಾದಿಸಿದ್ದರು.

ಮೃತ ಅನ್ವರ್ ಅವರಿಗೆ ಪತ್ನಿ ಮತ್ತು ಒಬ್ಬ ಪುತ್ರ ಇದ್ದಾರೆ. ಅನ್ವರ್ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ (Jawaharlal Nehru University -JNU) ಪದವೀಧರರಾಗಿದ್ದು, ಅಲಹಾಬಾದ್ ಮೂಲದವರು.

ಪ್ರತಿಷ್ಠಿತ ವಸಂತ ಕುಂಜ್ ಪ್ರದೇಶದಲ್ಲಿ ಏಕಾಂಗಿಯಾಗಿ ವಾಸವಿದ್ದ ಅನ್ವರ್ ಬುಧವಾರ ಬೆಳಗ್ಗೆ ದಾರುಣ ಸಾವುಕಂಡಿದ್ದಾರೆ. ಅವರ ಪತ್ನಿ Jawaharlal Nehru Universityಯಲ್ಲಿ ಪ್ರಾಧ್ಯಾಪಕರಾಗಿದ್ದು, ವಿವಿ ವಸತಿ ಸಮುಚ್ಚಯದಲ್ಲೇ ಪುತ್ರನ ಜತೆಗೆ ವಾಸವಾಗಿದ್ದರು.

'ಅನ್ವರ್ ಅವರ ವಿರುದ್ಧ ಮಂಗಳವಾರ 24 ವರ್ಷದ ಯುವತಿಯೊಬ್ಬಳು ಅತ್ಯಾಚಾರ ಆರೋಪ ಹೊರಿಸಿ, ದೂರು ದಾಖಲಿಸಿದ್ದರು. ಇದರಿಂದ ನೊಂದ ಅನ್ವರ್ ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಯಲ್ಲಿ ಅನ್ವರ್ ಮಹಡಿಯಿಂದ ಹಾರಿಬಿದ್ದರು.

ತಕ್ಷಣ ಅವರನ್ನು ಫಾರ್ಟಿಸ್ ಆಸ್ಪತ್ರೆಗೆ (Fortis Hospital) ಕೊಂಡೊಯ್ದೆವು. ತದನಂತರ AIIMS Trauma Centre ಗೂ ದಾಖಲಿಸಿದೆವು. ಆದರೆ ಆ ವೇಳೆಗೆ ಅಮಾಯಕ ಅನ್ವರ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು' ಎಂದು ಸ್ಥಳೀಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+