ಉನ್ನಾವೋ ಅತ್ಯಾಚಾರ ಪ್ರಕರಣ: ಶಾಸಕ ಕುಲದೀಪ್ ಸೇಗರ್ ಅಪರಾಧಿ

ನವದೆಹಲಿ, ಡಿಸೆಂಬರ್ 16: ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಶಾಸಕ ಕುಲ್‌ದೀಪ್ ಸಿಂಗ್ ಸೇಂಗರ್ ಅಪಹರಣ ಮತ್ತು ಅತ್ಯಾಚಾರ ಮಾಡಿರುವುದು ಖಾತ್ರಿಯಾಗಿದ್ದು, ಕುಲ್‌ದೀಪ್ ದೋಷಿ ಆಗಿದ್ದಾರೆ ಎಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 19 ರಂದು ಪ್ರಕಟಿಸಲಾಗುವುದು.

ಅಪ್ರಾಪ್ತೆಯನ್ನು ಅಪಹರಣ ನಡೆಸಿದ್ದ ಕುಲ್‌ದೀಪ್ ಸಿಂಗ್ ಸೇಂಗರ್ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ಸಂತ್ರಸ್ತೆ ದೂರು ನೀಡಿದ ನಂತರ ಆಕೆಯ ಮೇಲೆ ವಾಹನ ಹರಿಸಿ ಕೊಲ್ಲುವ ಪ್ರಯತ್ನ ಮಾಡಲಾಯಿತು. ಈ ಅಪಘಾತದಲ್ಲಿ ಸಂತ್ರಸ್ತೆ ಗಾಯಗೊಂಡಳಾದರೂ ಆಕೆಯ ಚಿಕ್ಕಮ್ಮ ಸೇರಿದಂತೆ ಇನ್ನೊಬ್ಬ ಬಂಧು ಮೃತಪಟ್ಟರು.

Unnao Rape Case MLA Kuldeep Singh Sengar Convict: Court

ಉನ್ನಾವೋ ಅತ್ಯಾಚಾರ ಪ್ರಕರಣವೆಂದೇ ಖ್ಯಾತವಾದ ಈ ಪ್ರಕರಣ ದೇಶದ ಗಮನ ಸೆಳೆದಿತ್ತು. ಬಿಜೆಪಿ ವಿರುದ್ಧವೂ ಆಕ್ರೋಶಕ್ಕೆ ಕಾರಣವಾಗಿತ್ತು. ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ನಂತರ ಬಿಜೆಪಿಯು ಕುಲ್‌ದೀಪ್ ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿತು.

ಕೆಲವೇ ದಿನಗಳ ಹಿಂದೆ ಕುಲ್‌ದೀಪ್ ಸಿಂಗ್ ಸೇಂಗರ್ ಹುಟ್ಟುಹಬ್ಬ ಇತ್ತು, ಬಿಜೆಪಿ ಸಂಸದ ಸಾಕ್ಷಿ ಸಿಂಗ್ ಮಹರಾಜ್ ಕುಲ್‌ದೀಪ್‌ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಟ್ವೀಟ್ ಮೂಲಕ ತಿಳಿಸಿದ್ದರು. ಇದೂ ಸುದ್ದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+