ಎಂಟೇ ಎಂಟು ವರ್ಷದಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ!

ನವದೆಹಲಿ, ಜೂನ್ 18: ವಿಶ್ವಸಂಸ್ಥೆಯ ವರದಿಯ ಪ್ರಕಾರ ಜನಸಂಖ್ಯೆಯಲ್ಲಿ ಭಾರತ ಇನ್ನು ಎಂಟು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಲಿದೆ!.

ಚೀನಾ ದೇಶವು ಜನಸಂಖ್ಯೆಯ ನಿಯಂತ್ರಣಕ್ಕೆ ತೆಗೆದುಕೊಂಡ ಕಠಿಣ ಕಾನೂನು ಕ್ರಮಗಳಿಂದಾಗಿ ಚೀನಾದಲ್ಲಿ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. 2019-2050 ರ ವೊಳಗೆ ಚೀನಾ ಜನಸಂಖ್ಯೆ 31.4 ಮಿಲಿಯನ್ ನಷ್ಟು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಆದರೆ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತು ಇದುವರೆಗೂ ಸೂಕ್ತ ಕಾನೂನು ಜಾರಿಯಾಗದ ಕಾರಣಕ್ಕಾಗಿ ದೇಶದ ಎಲ್ಲಾ ಸಮಸ್ಯೆಗಳಿಗೂ ಇದೇ ಮೂಲ ಕಾರಣವಾಗಿ ಕಂಡುಬರುತ್ತಿದೆ. ನಿಯಂತ್ರಣವೂ ಸಾಧ್ಯವಾಗುತ್ತಿಲ್ಲ.

UN report says, India will overtake China as worlds most populous country in 8 years

ಜನರಲ್ಲಿ ಅನಕ್ಷರತೆಯ ಕೊರತೆಯಿಂದಾಗಿ ಕುಟುಂಬ ಯೋಜನೆಗಳ ಬಗ್ಗೆ, ಗರ್ಭನಿರೋಧಕ ಔಷಧಗಳ ಬಗ್ಗೆ ಅರಿವಿಲ್ಲ.

ಸದ್ಯಕ್ಕೆ ಭಾರತದ ಜನಸಂಖ್ಯೆ 136 ಮಿಲಿಯನ್. ಚೀನಾ ಜನಸಂಖ್ಯೆ 142 ಮಿಲಿಯನ್. ತರಹೇವಾರಿ ಔಷಧಗಳು, ವೈದ್ಯಕೀಯ ಲೋಕದ ಆವಿಷ್ಕಾರಗಳಿಂದಾಗಿ ಮನುಷ್ಯನ ಸರಾಸರಿ ಜೀವಿತಾವಧಿಯೂ 64 ವರ್ಷಗಳಿಂದ 76 ವರ್ಷಕ್ಕೆ ಹೆಚ್ಚಿದೆ. ಇದು 2050 ರ ಹೊತ್ತಿಗೆ 77 ವರ್ಷಗಳಿಗೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+