ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿ ಕಿರುಕುಳ ಆರೋಪ, ಉಬರ್ ಚಾಲಕ ಅಮಾನತು

By Mahesh
|
Google Oneindia Kannada News

ನವದೆಹಲಿ, ಜೂ.01: ಮೊಬೈಲ್ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆ ಮತ್ತೆ ಕೆಟ್ಟ ವಿಷಯಕ್ಕೆ ಸುದ್ದಿಯಾಗಿದೆ. ಗುರ್ ಗಾಂವ್ ನಲ್ಲಿ ಉಬರ್ ಟ್ಯಾಕ್ಸಿ ಚಾಲಕನೊಬ್ಬ ಯುವತಿಯೊಬ್ಬಳಿಗೆ ಮುತ್ತು ನೀಡಲು ಹೋಗಿ ಕೆಲಸ ಕಳೆದುಕೊಂಡಿದ್ದಾರೆ. ಉಬರ್ ಫೇಸ್ ಬುಕ್ ಪುಟದಲ್ಲಿ ದೂರು ದಾಖಲಾದ ಕೆಲ ಸಮಯದಲ್ಲೇ ಕ್ರಮ ಜರುಗಿಸಿದ್ದು ವಿಶೇಷ.

ಉಬರ್ ಟ್ಯಾಕ್ಸಿ ಡ್ರೈವರ್ ನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮತ್ತೊಮ್ಮೆ ದಾಖಲಾಗಿದೆ. 21 ವರ್ಷ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚಾಲಕನನ್ನು ಸಂಸ್ಥೆ ಹೊರಹಾಕಿದೆ. ಯುವತಿಯ ಸೋದರ ಉಬರ್ ಫೇಸ್ ಬುಕ್ ಪುಟದಲ್ಲಿ ಘಟನೆ ಬಗ್ಗೆ ವಿವರಿಸಿ ದೂರು ದಾಖಲಿಸಿದ್ದರು. [ಉಬೇರ್ ಚಾಲಕನಿಂದ ಲೈಂಗಿಕ ಕಿರುಕುಳ]

Uber suspends driver after Facebook post claims molestation

ನನ್ನ ಸೋದರಿ ಗುರ್ ಗಾಂವ್ ನಿಂದ ನಿಮ್ಮ ಸಂಸ್ಥೆ ಟ್ಯಾಕ್ಸಿ ಬಳಸಿದ್ದರು. ಚಾಲಕ ವಿನೋದ್ ಆಕೆಗೆ ಬಲವಂತವಾಗಿ ಮುತ್ತು ನೀಡಲು ಯತ್ನಿಸಿದ್ದಾನೆ. ಆತನ ವಿರುದ್ಧ ದೂರು ದಾಖಲಿಸಿದ್ದೇನೆ. ಇನ್ನೂ ಕ್ರಮ ಕೈಗೊಂಡಿಲ್ಲ. ನಿಮ್ಮ ಸಂಸ್ಥೆಯ ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದು ಕಷ್ಟಕರವಾಗಿದೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಬರೆದಿದ್ದಾರೆ. [ಓಲಾ, ಉಬರ್ ಟ್ಯಾಕ್ಸಿ ಮೊಬೈಲ್ ಅಪ್ಲಿಕೇಷನ್ ಗೆ ನಿಷೇಧ?]

ಇದಕ್ಕೆ ಉತ್ತರಿಸಿದ ಉಬರ್ ದೆಹಲಿಯ ಪ್ರಧಾನ ವ್ಯವಸ್ಥಾಪಕ ಗಗನ್ ಭಾಟಿಯಾ, ನಮ್ಮ ತಂಡ ಕೂಡಲೇ ಚಾಲಕನನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ಕಲೆಹಾಕಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗಿದ್ದು, ಚಾಲಕ ತಪ್ಪಿತಸ್ಥ ಎಂದು ಕಂಡು ಬಂದ ಕೂಡಲೇ ಆತನನ್ನು ಅಮಾನತುಗೊಳಿಸಲಾಗಿದೆ. ನಾವು ಯುವತಿಯರ ಸುರಕ್ಷತೆ ಬಗ್ಗೆ ಅಗತ್ಯ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ದೆಹಲಿಯಲ್ಲಿ ಉಬರ್ ಕ್ಯಾಬ್ ಚಾಲಕ ಶಿವಕುಮಾರ್ ಯಾದವ್ ಅವರು 2014ರ ಡಿಸೆಂಬರ್ ನಲ್ಲಿ 27 ವರ್ಷ ವಯಸ್ಸಿನ ಮಹಿಳೆಗೆ ಲೈಂಗಿಕ ಕಿರುಕುಳ ನಡೆದಿದ್ದರು. ದೆಹಲಿಯ ಸರಾಯಿ ರೊಹಿಲ್ಲಾ ಪ್ರದೇಶದಲ್ಲಿ ನಡೆದ ಈ ದುರ್ಘಟನೆ ನಂತರ ಇಂಟರ್ನೆಟ್, ಮೊಬೈಲ್ ಮೂಲಕ ಉಬರ್ ಕ್ಯಾಬ್ ಟ್ಯಾಕ್ಸಿ ಸೇವೆ ನೋಂದಣಿಯನ್ನು ನಿಷೇಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
App-based taxi operator Uber is once again in trouble. This time, it has been reported that a 21-year-old girl was allegedly molested by the firm's driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X