ಚಿಕಾಗೋದಲ್ಲೂ ಉಬೇರ್ ಚಾಲಕನಿಂದ ಲೈಂಗಿಕ ಕಿರುಕುಳ
ಚಿಕಾಗೋ, ಜ. 15: ಉಬೇರ್ ಟ್ಯಾಕ್ಸಿ ಸಂಸ್ಥೆಯು ಚಾಲಕರನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಹಾಗೂ ವರ್ತನೆಗಳ ಕುರಿತು ಪರಿಶೀಲನೆ ನಡೆಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಚಿಕಾಗೋದಲ್ಲಿ ಕೂಡ ಉಬೇರ್ ಟ್ಯಾಕ್ಸಿ ಚಾಲಕನೋರ್ವ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. [ಅತ್ಯಾಚಾರಿಗೇ ಅವಮಾನ]

ವಿಲ್ಲಾ ಪಾರ್ಕ್ ನಿವಾಸಿ ಅದ್ನಾನ್ ನಫಸತ್ (46) ಎಂಬಾತ 21 ವರ್ಷ ವಯಸ್ಸಿನ ಪ್ರಯಾಣಿಕರ ಮೇಲೆ ದಾಳಿ ನಡೆಸಿರುವ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಕುಕ್ ಕೌಂಟಿ ಪ್ರೊಸಿಕ್ಯೂಟರ್ ತಿಳಿಸಿದ್ದಾರೆ. [ಬೆಂಗಳೂರಲ್ಲಿ 8 ಟ್ಯಾಕ್ಸಿ ಸೇವೆ]
ಪ್ರಕರಣದ ನಂತರ ನಫಸತ್‌ನನ್ನು ಉಬೇರ್ ಟ್ಯಾಕ್ಸಿ ಸಂಸ್ಥೆ ಕೆಲಸದಿಂದ ತೆಗೆದುಹಾಕಿದೆ ಹಾಗೂ ತನಿಖೆಗೆ ಸಹಕರಿಸುತ್ತಿದೆ. ಇದು ಚಿಕಾಗೋದಲ್ಲಿ ಉಬೇರ್ ಟ್ಯಾಕ್ಸಿ ಚಾಲಕನೋರ್ವ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಎರಡನೇ ಪ್ರಕರಣವಾಗಿದೆ. [ಹಗ್ಗ ಕಟ್ಟಿ ಟ್ಯಾಕ್ಸಿ ಎಳೆದು ಪ್ರತಿಭಟನೆ]











Click it and Unblock the Notifications