ಓಲಾ, ಉಬರ್ ಟ್ಯಾಕ್ಸಿ ಮೊಬೈಲ್ ಅಪ್ಲಿಕೇಷನ್ ಗೆ ನಿಷೇಧ?

ನವದೆಹಲಿ, ಏ.6: ಸಾಮಾಜಿಕ ಜಾಲ ತಾಣಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆ ಉಂಟಾದ ಬೆನ್ನಲ್ಲೇ ಎನ್ ಡಿಎ ಸರ್ಕಾರದ ಕಣ್ಣು ಈಗ ಮೊಬೈಲ್ ಅಪ್ಲಿಕೇಷನ್ ಮೇಲೆ ಬಿದ್ದಿದೆ. ದೇಶದೆಲ್ಲೆಡೆ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಟ್ಯಾಕ್ಸಿ ಸೇವೆಗೆ ಕಟಂಕವಾಗುವ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ.

ಇದರಿಂದ ಮೊಬೈಲ್ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಓಲಾ, ಉಬರ್, ಟ್ಯಾಕ್ಸಿ ಫಾರ್ ಶ್ಯೂರ್ ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ. ಈ ಸಂಸ್ಥೆಗಳ ಮೊಬೈಲ್ ಅಪ್ಲಿಕೇಷನ್ ಬಳಸದಂತೆ ಸರ್ಕಾರ ನಿರ್ಬಂಧ ಹೇರಲಿದೆ. ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ(DeitY) ಇಲಾಖೆ ಈ ಬಗ್ಗೆ ವಿವರಣೆ ಕೇಳಿ ಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದಿದೆ. [ಬೆಂಗಳೂರಲ್ಲಿರುವುದು ಎಂಟೇ ಟ್ಯಾಕ್ಸಿ ಸೇವೆಗಳು!]

Government contemplating pan-India ban of Uber, Ola, and TaxiForSure Apps

ಮೊಬೈಲ್ ಟ್ಯಾಕ್ಸಿ ಸೇವೆ ಬಂದ್ ಮಾಡಲು ದೆಹಲಿ ಸರ್ಕಾರ DeitY ಗೆ ಇತ್ತೀಚೆಗೆ ಮನವಿ ಮಾಡಿಕೊಂಡಿದೆ. ಕೇವಲ ಒಂದು ರಾಜ್ಯದಲ್ಲಿ ಮಾತ್ರವೇ ಮೊಬೈಲ್ ಅಪ್ಲಿಕೇಷನ್ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಮಾಹಿತಿ ತಂತ್ರಜ್ಞಾನ ಇಲಾಖೆಗೆ ತಿಳಿದು ಬಂದಿದೆ. ಹೀಗಾಗಿ ದೇಶದೆಲ್ಲೆಡೆ ನಿಷೇಧ ಹೇರಲು ಸಾರಿಗೆ ಇಲಾಖೆ ನೆರವು ಕೋರಿದೆ. [ಕ್ಯಾಬ್ ಬ್ಯಾನ್: ಬೆಂಗಳೂರು ಟ್ಯಾಕ್ಸಿ ಚಾಲಕರು ಏನಂತಾರೆ?]

ಅದರೆ, ಮೊಬೈಲ್ ಅಪ್ಲಿಕೇಷನ್ ಮಾತ್ರ ಬಂದ್ ಮಾಡಲು ತಾಂತ್ರಿಕವಾಗಿ ತುಂಬಾ ಕಷ್ಟ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ಉಬರ್‌ ಟ್ಯಾಕ್ಸಿಯ ಚಾಲಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಬಳಿಕ, ಇಂಥ ಮೊಬೈಲ್‌ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮೊಬೈಲ್ ಟ್ಯಾಕ್ಸಿ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. [ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?]

ಪ್ರಯಾಣಿಕರ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳುವ ಸರ್ಕಾರ ಅನಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹಿಂಸೆ ನೀಡಲು ಮುಂದಾಗಿದೆ ಎಂದು ಚರ್ಚೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+