ರಾಧೇ ಮಾ 'ಸೆಕ್ಸ್ ರಾಕೆಟ್' ನಡೆಸುತ್ತಾರೆ: ರೂಪದರ್ಶಿ
ನವದೆಹಲಿ, ಸೆ. 09: ಸ್ವಯಂಘೋಷಿತ ದೇವ ಮಾನವರ ಸಾಲಿನಲ್ಲಿ ಸದ್ಯಕ್ಕೆ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ರಾಧೇ ಮಾ ಅಲಿಯಾಸ್ ಸುಖ್ವಿಂದರ್ ಕೌರ್ ಅವರಿಗೆ ಮತ್ತೆ ಆಘಾತಕಾರಿ ಸುದ್ದಿ ಸಿಕ್ಕಿದೆ. ರೂಪದರ್ಶಿಯೊಬ್ಬರು ರಾಧೇ ಮಾ ನಿದ್ದೆ ಇನ್ನಷ್ಟು ಕೆಡಿಸಿದ್ದಾರೆ. ರಾಧೇ ಮಾ ಅವರು ವೇಶ್ಯಾವಾಟಿಕೆ ದಂಧೆ ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ.
ವರದಕ್ಷಿಣೆ ಕಿರುಕುಳ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮುಂಬೈ ಸೇರಿದಂತೆ ಅನೇಕ ಕಡೆ ಈಗಾಗಲೇ ರಾಧೇ ಮಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಹೊಸದಾಗಿ ಕೇಳಿ ಬಂದಿರುವ ಈ ಆರೋಪ ರಾಧೇ ಮಾ ಭಕ್ತರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. [ಸನ್ನಿ ಲಿಯೋನ್ ಫ್ಯಾನ್ ರಾಧೇ ಮಾ ಬಗ್ಗೆ ಟ್ವೀಟ್ಸ್]
ಆರ್ಷಿ ಖಾನ್ ಹೆಸರಿನ ಮಾಡೆಲ್ ಅವರು ರಾಧೇ ಮಾ ವಿರುದ್ಧ ಈ ರೀತಿ ಅರೋಪ ಮಾಡಿದ್ದಾರೆ. ಹೈಟೆಕ್ ವೇಶ್ಯಾವಾಟಿಕೆ ನಡೆಸುವುದರಲ್ಲಿ ರಾಧೇ ಮಾ ಹಾಗೂ ಅವರ ಅನುಯಾಯಿಗಳು ಎತ್ತಿದ ಕೈ. ಈ ಬಗ್ಗೆ ನನಗೂ ಆಫರ್ ಬಂದಿತ್ತು. ರಾಧೇ ಮಾ ಅವರ ವ್ಯವಹಾರ ನೋಡಿಕೊಳ್ಳುವ ಏಜೆಂಟ್ ನನ್ನನ್ನು 'ಸೆಕ್ಸ್ ರಾಕೆಟ್' ನಲ್ಲಿ ತಳ್ಳಲು ಯತ್ನಿಸಿದ್ದರು ಎಂದು ಆರ್ಷಿ ಆರೋಪಿಸಿದ್ದಾರೆ.ಈ ಸುದ್ದಿಯನ್ನು ಕೇಳಿಸಿಕೊಳ್ಳಲು ಒನ್ ಇಂಡಿಯಾ ಸುದ್ದಿ ವಿಡಿಯೋ ಲಿಂಕ್ ಕ್ಲಿಕ್ ಮಾಡಿ

ಆರ್ಷಿ ಖಾನ್ ಈ ಬಗ್ಗೆ ಬಾಯ್ಬಿಟ್ಟ ನಂತರ
ಆರ್ಷಿ ಖಾನ್ ಈ ಬಗ್ಗೆ ಬಾಯ್ಬಿಟ್ಟ ನಂತರ ಮಾಡೆಲ್ ಗೆ ಜೀವ ಬೆದರಿಕೆಗಳು ಬರತೊಡಗಿವೆ. ನಂತರ ಭಯಗೊಂಡು ಪೊಲೀಸರಿಗೆ ದೂರು ನೀಡಿರುವುದಾಗಿ ಆರ್ಷಿ ಹೇಳಿದ್ದಾರೆ. ಈ ಹಿಂದೆ ಟಿವಿ ನಟಿ ಡಾಲಿ ಬಿಂದ್ರಾ ಕೂಡಾ ಈ ಬಗ್ಗೆ ದೂರಿದ್ದರು. ರಾಧೇ ಮಾ ನನಗೂ ಈ ರೀತಿ ಹೇಳಿದ್ದರು ಎಂದು ಮಾಜಿ ಭಕ್ತೆ ಡಾಲಿ ಆರೋಪಿಸಿದ್ದರು.

ಡಾಲಿ ಬಿಂದ್ರಾ ರಿಂದ ಪೊಲೀಸರಿಗೆ ದೂರು
ಐಪಿಸಿ ಸೆಕ್ಷನ್ 249,354, 506 (2), 120 (ಬಿ) ಅನ್ವಯ ರಾಧೇ ಮಾ ವಿರುದ್ಧ ದೂರು ದಾಖಲಿಸಲಾಗಿದೆ. ಸಂಜೀವ್ ಗುಪ್ತಾ, ತಳ್ಳಿ ಬಾಬಾ, ಭೂಪೇಂದ್ರ ಹಾಗೂ ಇತರರು ಸಹ ಆರೋಪಿಗಳಾಗಿದ್ದಾರೆ. ಬೊರಿವಿಲಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದು ವರದಕ್ಷಿಣೆ ಕಿರುಕುಳ ಆರೋಪ
ರಾಧೇ ಮಾ ವಿರುದ್ಧ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಆರೋಪ ಹೊರೆಸಿದ್ದಾರೆ. ರಾಧೇ ಮಾ ಅವರು ನಮ್ಮ ಆತ್ತೆ ಹಾಗೂ ಗಂಡನಿಗೆ ಮೋಡಿ ಮಾಡಿ ನನ್ನ ನೋವಿಗೆ ಕಾರಣರಾಗಿದ್ದಾರೆ ಎಂದಿದ್ದಾರೆ. ಇದಲ್ಲದೆ ವಕೀಲ ಅಶೋಕ್ ರಾಜ್ ಪೂತ್ ಅವರು ಮೂಢನಂಬಿಕೆ ಹಬ್ಬಿಸುತ್ತಿರುವ ರಾಧೇ ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ರಾಧೇ ಮಾರನ್ನು ಕಾಳಿ ಮಾಗೆ ಹೋಲಿಸಿದ್ದ ಸೋನು ನಿಗಮ್
ನಮ್ಮ ದೇಶದಲ್ಲಿ ಕಾಳಿ ಮಾ ಅವರನ್ನು ರಾಧೇ ಮಾ ಅವರಿಗಿಂತ ಕಡಿಮೆ ಬಟ್ಟೆಯಲ್ಲಿ ಚಿತ್ರಿಸಲಾಗುತ್ತಿದೆ. ವಸ್ತ್ರ ಸಂಹಿತೆ ಜಾರಿ ಮಾಡಿ ಒಬ್ಬರನ್ನು ದೂರುವುದು ಅವರ ವಿರುದ್ಧ ಮೊಕದ್ದಮೆ ಹೂಡುವುದು ಎಷ್ಟು ಸರಿ ಎಂದು ಸೋನು ನಿಗಮ್ ಟ್ವೀಟ್ ಮಾಡಿದ್ದಲ್ಲದೆ ನಂತರ ಸಮರ್ಥಿಸಿಕೊಂಡಿದ್ದರು. [ವಿವರ ಇಲ್ಲಿ ಓದಿ]

ಯಾರಿವಳು ಆರ್ಷಿ ಖಾನ್?
ಭೋಪಾಲ್ ಮೂಲದ ರೂಪದರ್ಶಿ ಆರ್ಷಿ ಖಾನ್ ಗೆ ವಿವಾದಗಳೇನು ಹೊಸತೇನಲ್ಲ. ಪಾಕಿಸ್ತಾನದ ಕ್ರಿಕೆಟರ್ ಶಹೀದ್ ಅಫ್ರಿದಿ ಜೊತೆ ಸಂಬಂಧ ಇದೆ ಎಂದು ಕೂಡಾ ಗುಲ್ಲೆಬ್ಬಿಸಿದ್ದಳು. ಲಕ್ನೋದ ಸಮಾರಂಭವೊಂದರಲ್ಲಿ ನಿರ್ಮಾಪಕರೊಬ್ಬರ ಕೆನ್ನೆ ಊದಿಸಿದ್ದಳು. ಇದು ಕೂಡಾ ಪ್ರಚಾರ ಪಡೆಯುವ ತಂತ್ರ ಇರಬಹುದು ಎಂದು ರಾಧೇ ಮಾ ಭಕ್ತರು ಕಿಡಿಕಾರಿದ್ದಾರೆ.












Click it and Unblock the Notifications