ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಧೆ ಮಾಳನ್ನು ಕಾಳಿಗೆ ಹೋಲಿಸಿ ಕಷ್ಟಕ್ಕೆ ಸಿಲುಗಿದ ಸೋನು

By Mahesh
|
Google Oneindia Kannada News

ಮುಂಬೈ, ಆಗಸ್ಟ್ 18: ಸ್ವಯಂಘೋಷಿತ ದೇವಮಹಿಳೆ, ವಿವಾದಿತ ರಾಧೇ ಮಾ ಪರ ಟ್ವೀಟ್ ಮಾಡಿದ ತಪ್ಪಿಗೆ ಗಾಯಕ ಸೋನು ನಿಗಮ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಕೆಯಾಗಿರುವುದು ಈಗಾಗಲೇ ತಿಳಿದಿರಬಹುದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋನು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಕಾಳಿ ಮಾ ಅವರನ್ನು ರಾಧೇ ಮಾ ಅವರಿಗಿಂತ ಕಡಿಮೆ ಬಟ್ಟೆಯಲ್ಲಿ ಚಿತ್ರಿಸಲಾಗುತ್ತಿದೆ. ವಸ್ತ್ರ ಸಂಹಿತೆ ಜಾರಿ ಮಾಡಿ ಒಬ್ಬರನ್ನು ದೂರುವುದು ಅವರ ವಿರುದ್ಧ ಮೊಕದ್ದಮೆ ಹೂಡುವುದು ಎಷ್ಟು ಸರಿ ಎಂದು ಸೋನು ನಿಗಮ್‌ ಟ್ವೀಟ್‌ ಮಾಡಿದ್ದರು.

ಕಾಳಿ ದೇವತೆಗೆ ರಾಧೇ ಮಾರನ್ನ್ನು ಸೋನು ನಿಗಮ್ ಅವರು ಹೋಲಿಸಿದ್ದಾರೆ. ಹಿಂದೂ ಧರ್ಮಕ್ಕೆ ಅಪಮಾನ ಎಸಗಿದ್ದಾರೆ ಎಂದು ಹೇಳಿ ಸೋನು ವಿರುದ್ಧ ಸಮತ್ ನಗರ ಹಾಗೂ ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲಾಗಿದೆ. [ಸನ್ನಿ ಲಿಯೋನ್ ಫ್ಯಾನ್ ರಾಧೇ ಮಾ ಬಗ್ಗೆ ಟ್ವೀಟ್ಸ್ ]

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಸೋನು ವಿರುದ್ಧ ಇನ್ನೂ ಎಫ್ ಐಆರ್ ಹಾಕಿಲ್ಲ ಎಂದು ಡಿಸಿಪಿ ದಹಿಕರ್ ಹೇಳಿದ್ದಾರೆ. ಸೋನು ನಿಗಮ್ ಟ್ವೀಟ್ಸ್ ಹಾಗೂ ಪ್ರತಿಕ್ರಿಯೆಗಳನ್ನು ಮುಂದೆ ಓದಿ...

ನನ್ನನ್ನು ಯಾಕೆ ಟಾರ್ಗೆಟ್ ಮಾಡ್ತಾ ಇದ್ದೀರಾ?: ಸೋನು

ನನ್ನನ್ನು ಯಾಕೆ ಟಾರ್ಗೆಟ್ ಮಾಡ್ತಾ ಇದ್ದೀರಾ?: ಸೋನು

ನನ್ನನ್ನು ಯಾಕೆ ಟಾರ್ಗೆಟ್ ಮಾಡ್ತಾ ಇದ್ದೀರಾ?, ಆ ಮಹಿಳೆ ಯಾರು ಎಂಬುದು ನನಗೆ ತಿಳಿದಿಲ್ಲ, ಆಕೆ ಯಾರದ್ದೋ ಪತ್ನಿ, ತಾಯಿ, ಮಗಳು ಆಗಿರಲೇಬೇಕಲ್ಲವೇ, ಮೊದಲು ಗೌರವ ಕೊಡಿ, ಕೆಲವರು ಆಕೆಯನ್ನು ಮಾ ಎಂದು ಕರೆದರೆ ನಾವು ಯಾಕೆ ವಿರೋಧಿಸಬೇಕು.

ಆಕೆಯನ್ನು ಕಾನೂನು ಅಪರಾಧಿ ಎಂದು ಕರೆದಿದೆಯೇ?

ಆಕೆಯನ್ನು ಕಾನೂನು ಅಪರಾಧಿ ಎಂದು ಕರೆದಿದೆಯೇ?

ರಾಧೆ ಮಾ ಅವರನ್ನು ಕಾನೂನು ಅಪರಾಧಿ ಎಂದು ಕರೆದಿದೆಯೇ? ದೇಶದ ಪ್ರಜ್ಞಾವಂತ ನಾಗರೀಕರಾಗಿ ನಾವು ಆಕೆಯ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯೇ? ದೇಶದ ಬಗ್ಗೆ ಈಗಾಗಲೇ ಅತ್ಯಾಚಾರ ಪ್ರಕರಣಗಳು ಹೆಚ್ಚಿರುವ ಸಂದರ್ಭದಲ್ಲಿ ಮಹಿಳೆಯ ಮೇಲೆ ಈ ರೀತಿ ಮುಗಿ ಬೀಳುವುದು ಸರಿಯಲ್ಲ ಎಂದಿದ್ದಾರೆ.

 ಕಾಳಿ ಮಾ ರನ್ನು ಒಪ್ಪಿಕೊಂಡಿದ್ದೇವೆ

ಕಾಳಿ ಮಾ ರನ್ನು ಒಪ್ಪಿಕೊಂಡಿದ್ದೇವೆ

ನಗ್ನ ಅಥವಾ ಕನಿಷ್ಠ ಉಡುಪುಗಳ ಕಾಳಿ ಮಾ ರನ್ನು ನಾನು ಚಿಕ್ಕಂದಿನಿಂದ ಒಪ್ಪಿಕೊಂಡಿದ್ದೇವೆ. ಆದರೆ, ರಾಧೆ ಮಾ ಅವರ ಆಧಾತ್ಮ ಶಕ್ತಿ ಬಗ್ಗೆ ಅಪನಂಬಿಕೆ ಇದ್ದರೆ ಕಾನೂನಿನ ಪ್ರಕಾರ ಹೋರಾಟ ನಡೆಸಿ, ಅಪಮಾನ ಮಾಡಬೇಡಿ. ಮಿನಿ ಸ್ಕರ್ಟ್ ಧರಿಸಿದ ಮಾತ್ರಕ್ಕೆ ದೂಷಿಸುವುದು ಸರಿಯಲ್ಲ.

ಕುಂಭಮೇಳದ ಬಗ್ಗೆ ಸೋನು

ಕುಂಭಮೇಳದ ಬಗ್ಗೆ ಸೋನು

ಕುಂಭಮೇಳದ ಬಗ್ಗೆ ಸೋನು ಟ್ವೀಟ್ ಮಾಡಿ, ನಗ್ನ ಸಾಧುಗಳು, ನಾಗಾಸಾಧುಗಳು, ದಿಗಂಬರ ಮುನಿಗಳ ಬಗ್ಗೆ ಆಕ್ಷೇಪ ಏಕಿಲ್ಲ, ನಿಮ್ಮ ನಂಬಿಕೆಗೆ ಅನುಗುಣವಾಗಿ ಎಲ್ಲರೂ ವರ್ತಿಸಬೇಕು ಎಂದೇಕೆ ಬಯಸುತ್ತೀರಿ. ವಸ್ತ್ರ ಸಂಹಿತೆಯಿಂದ ಆಧಾತ್ಮ ಶಕ್ತಿ ಹೆಚ್ಚು ಕಮ್ಮಿ ಆಗುತ್ತದೆಯೇ?

ಹೋಗಿ ಎಲ್ಲರ ಮೇಲೂ ದೂರು ನೀಡಿ

ಹೋಗಿ ಎಲ್ಲರ ಮೇಲೂ ದೂರು ನೀಡಿ ಪುರುಷ-ಮಹಿಳೆ ಎಂದು ವ್ಯತ್ಯಾಸ ಮಾಡಬೇಡಿ.

ಸರಿಯಾದ ನಿಲುವು ಹೊಂದಿ, ಆರಾಮಾಗಿರಿ

ಸರಿಯಾದ ನಿಲುವು ಹೊಂದಿ, ಆರಾಮಾಗಿರಿ

ಹೇಮಮಾಲಿನಿ ನೃತ್ಯ ನಿಮಗೆ ರುಚಿಸುತ್ತದೆ. ದೇವ ದೇವತೆಗಳಂತೆ ವೇಷ ಧರಿಸುವವರನ್ನು ನೋಡುತ್ತೀರಿ, ರಾಧೆ ಮಾ ವಸ್ತ್ರ ವಿನ್ಯಾಸದ ಏಕೆ ನಿಮಗೆ ತೊಂದರೆಯಾಗುತ್ತಿದೆ. ಮಹಿಳೆ ವಿರುದ್ಧದ ಶೋಷಣೆ ಖಂಡಿಸಿ ಮೇಣದ ಬತ್ತಿ ಹಚ್ಚಿ ಪ್ರತಿಭಟಿಸುತ್ತೀರಿ, ಅದರೆ, ಮಹಿಳೆಯ ನಗ್ನ ಚಿತ್ರ ಹಂಚಿ ಖುಷಿಪಡುತ್ತೀರಿ, ಸರಿಯಾದ ನಿಲು ತಳೆದು ಆರಾಮಾಗಿರಿ,

English summary
The singer and TV host Sonu Nigam got into controversy after he tweeted about the controversial self-styled God-Woman Radhe Maa, who is news for dowry harassment case. With the mere mention of her name, people started judging the singer and was attacked by his fans on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X