Corona Update: ಭಾರತದಲ್ಲಿ 500ರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ
ದೆಹಲಿ, ಏಪ್ರಿಲ್ 19: ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 15 ಸಾವಿರ ದಾಟಿದೆ. ಏಪ್ರಿಲ್ 19 ರಂದು ಬೆಳಿಗ್ಗೆ 9 ಗಂಟೆಯವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 15712 ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 1334 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು 27 ಜನರು ಕೊವಿಡ್ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ತಿಳಿಸಿದೆ..
ದೇಶದಲ್ಲಿ ಒಟ್ಟು 15712 ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 12974 ಕೇಸ್‌ಗಳು ಚಾಲ್ತಿಯಲ್ಲಿದೆ. 2230 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಡಿಸ್ಚಾರ್ಜ್ ಆಗಿದ್ದಾರೆ. 507 ಮಂದಿ ಸೋಂಕಿನಿಂದ ಹೊರಬರದೆ ಸಾವನ್ನಪ್ಪಿದ್ದಾರೆ.
1,334 new cases, 27 deaths reported in the last 24 hours: Ministry of Health and Family Welfare https://t.co/F0NW1Ngm0C
— ANI (@ANI) April 19, 2020
ಕರ್ನಾಟಕದಲ್ಲಿ 18 ಏಪ್ರಿಲ್ ಸಂಜೆಯ ವರೆಗಿನ ಲೆಕ್ಕಾಚಾರ ನೋಡುವುದಾರೆ ರಾಜ್ಯದಲ್ಲಿ ಒಟ್ಟು ದೃಢಪಟ್ಟ ಪ್ರಕರಣಗಳು 384ಕ್ಕೆ ಏರಿಕೆಯಾಗಿದೆ. ಕೊವಿಡ್ ಸೋಂಕಿನಿಂದ ಮೃತಪಟ್ಟವರು 14 ಜನರು. ಇದರಿಂದ ಗುಣಮುಖರಾದವರು 104 ಜನರು.

ಜಗತ್ತಿನಾದ್ಯಂತ ಒಟ್ಟು 23 ಲಕ್ಷ (2,332,004) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 160,767 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 597,220 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಅಮೆರಿಕದಲ್ಲಿ 39,015 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಟಲಿ ದೇಶದಲ್ಲಿ 23,227 ಜನರು ಸಾವನ್ನಪ್ಪಿದ್ದಾರೆ.












Click it and Unblock the Notifications