ಈ ದಶಕಕ್ಕೆ ಭದ್ರ ಬುನಾದಿ ಹಾಕಲಿದೆ ನಮ್ಮ ಬಜೆಟ್: ಮೋದಿ

Recommended Video

      BUDGET 2020 : ಎಲ್ಲರ ಚಿತ್ತ ಕೇಂದ್ರ ಬಜೆಟ್ ಮೇಲೆ ಕೇಂದ್ರೀಕೃತ | BJP | CONGRESS | INDIA | ONEINDIA KANNADA

      ನವದೆಹಲಿ, ಜನವರಿ 31: ಬಜೆಟ್ 2020, ಈ ದಶಕಕ್ಕೆ ಭದ್ರ ಅಡಿಪಾಯವನ್ನು ಹಾಕಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

      ಇಂದಿನಿಂದ ಆರಂಭವಾದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ಅಧಿವೇಶನದಲ್ಲಿ ಭಾಗವಹಿಸುವ ಮುನ್ನಾ ಸುದ್ದಿಗಾರರೊಂದಿಗೆ ಮೋದಿ ಮಾತನಾಡಿದರು.

      'ಈ ಅಧಿವೇಶನದಲ್ಲಿ ಮುಖ್ಯವಾಗಿ ಆರ್ಥಿಕತೆಯ ಬಗ್ಗೆ ಮಾತ್ರವೇ ಚರ್ಚೆ ಆಗಲಿದೆ. ಎರಡೂ ಸದನದಲ್ಲಿ ಆರೋಗ್ಯಕರ ಚರ್ಚೆಗಳು ವಿಷಯಗಳ ಮೇಲೆ ನಡೆಯಲಿವೆ ಎಂಬುದು ನನ್ನ ನಿರೀಕ್ಷೆ' ಎಂದು ಮೋದಿ ಹೇಳಿದ್ದಾರೆ.

      This Budget Will Lay A Strong Foundation For This Decade: Modi

      ನಿನ್ನೆ ನಡೆದ ಸರ್ವ ಪಕ್ಷ ಸಭೆಯಲ್ಲೂ ಮೋದಿ ಅವರು ವಿಪಕ್ಷಗಳಲ್ಲಿ ಮನವಿ ಮಾಡಿದ್ದು, ಅಧಿವೇಶನವು ಗದ್ದಲ ರಹಿತವಾಗಿ, ಫಲಪ್ರಧವಾಗಿ ನಡೆಯಲು ಸಹಕಾರಿ ಕೋರಿದ್ದಾರೆ.

      ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ನಾಳೆ ಬಜೆಟ್ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಲಿದ್ದಾರೆ.

      2020 ಬಜೆಟ್ ಬಗ್ಗೆ ಅತಿಯಾದ ನಿರೀಕ್ಷೆಗಳು ಇದ್ದು, ಕುಸಿಯುತ್ತಿರುವ ಜಿಡಿಪಿ, ನಿರುದ್ಯೋಗ, ಆಟೋ ಮೊಬೈಲ್ ಸೇರಿದಂತೆ ಸಂಕಷ್ಟದಲ್ಲಿರುವ ಹಲವಾರು ಕ್ಷೇತ್ರಗಳಿಗೆ ಚೇತರಿಕೆ ನೀಡುವ ಯತ್ನವನ್ನು ಬಜೆಟ್ ಮಾಡಲಿದೆ ಎಂಬ ನಿರೀಕ್ಷೆಯಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+