ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ವಿರುದ್ಧ ನಿಜಕ್ಕೂ ಕೆಲಸ ಮಾಡುತ್ತಾ?

ನವದೆಹಲಿ, ಏಪ್ರಿಲ್ 24: ಕೊರೊನಾಕ್ಕೆ ಮದ್ದು ಅರಿಯಲು ಜಗತ್ತಿನ ಅನೇಕ ರಾಷ್ಟ್ರಗಳು ತೀವ್ರ ಪ್ರಯತ್ನ ನಡೆಸಿವೆ. ಆದರೆ, ಇನ್ನೂ ಅಂತಿ ಫಲಿತಾಂಶ ಸಿಗುತ್ತಿಲ್ಲ. ಕೆಲ ವಿಜ್ಞಾನಿಗಳು ಈ ವರ್ಷಾಂತ್ಯಕ್ಕೆ ಈ ಮಹತ್ಕಾರ್ಯ ಸಾದ್ಯವಾಗಬಹುದು ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಕೊರೊನಾಕ್ಕೆ ಮಲೇರಿಯಾ ತಡೆಗಟ್ಟಲು ಬಳಸುವ ಔಷಧಿಯಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಬಹುದು ಎನ್ನಲಾಗುತ್ತಿವೆ. ಈ ಔಷಧಿ ಕೊರೊನಾಕ್ಕೆ ಔಷಧಿ ಅಲ್ಲದಿದ್ದರೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಬಹುದಾಗಿದೆ ಎನ್ನಲಾಗುತ್ತಿದೆ. ಆದರೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಕ್ಕೆ ಅಂತಿಮ ಔಷಧಿ ಎಂದು ಹಲವು ಕಡೆ ಬಿಂಬಿತವಾಗುತ್ತಿದೆ.

ಈ ಬಗ್ಗೆ ಎನ್‌ಡಿಟಿವಿ ನಡೆಸಿದ ಸಂದರ್ಶನದಲ್ಲಿ ಜಗತ್ತಿನ ಖ್ಯಾತ ವೈದ್ಯಕೀಯ ನಿಯತಕಾಲಿಕೆಯಾದ ಲ್ಯಾನ್ಸೆಟ್‌ನ ಮುಖ್ಯ ಸಂಪಾದಕ ರಿಚರ್ಡ್ ಹೋರ್ಟನ್ ಅವರು ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ.

ಒಂದೂ ಉದಾಹರಣೆ ಸಿಕ್ಕಿಲ್ಲ

ಒಂದೂ ಉದಾಹರಣೆ ಸಿಕ್ಕಿಲ್ಲ

ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ಕೊರೊನಾಕ್ಕೆ ಔಷಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ಗುಣಪಡಿಸುತ್ತದೆ ಎನ್ನುವುದಕ್ಕೆ ಇದುವರೆಗೆ ಜಗತ್ತಿನಲ್ಲಿ ಎಲ್ಲಿಯೂ ಒಂದೂ ಉದಾಹರಣೆ (ಪುರಾವೆ) ಸಿಕ್ಕಿಲ್ಲ. ಬಿಜಿಸಿ ಲಸಿಕೆಯ ಪ್ರಭಾವದಿಂದ ಕೊರೊನಾಕ್ಕೆ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚು ಕಾಣುತ್ತಿದೆ ಎಂದು ರಿಚರ್ಡ್ ಹೋರ್ಟನ್ ವಿಡಿಯೋ ಸಂವಾದದಲ್ಲಿ ಹೇಳಿದ್ದಾರೆ.

ನಾಯಕತ್ವದಲ್ಲಿ ಕೊರತೆ ಕಾಣುತ್ತಿದೆ

ನಾಯಕತ್ವದಲ್ಲಿ ಕೊರತೆ ಕಾಣುತ್ತಿದೆ

ಕೊರೊನಾಕ್ಕೆ ಲಸಿಕೆ ಕಂಡುಹಿಡಿಯುವಲ್ಲಿ ವಿಶ್ವದ ಪ್ರಯತ್ನಗಳು ಅತ್ಯಂತ ಅಸಹ್ಯಕರವಾಗಿವೆ. ಪ್ರತಿಯೊಬ್ಬರೂ ತಮ್ಮದೇ ಆದ ಸಂಶೋಧನೆ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಎಲ್ಲಾ ದೇಶಗಳನ್ನು ಸಮನ್ವಯಗೊಳಿಸುವ ವಿಶ್ವ ಆರೋಗ್ಯ ಸಂಸ್ಥೆ ನಾಯಕತ್ವದಲ್ಲಿ ಕೊರತೆ ಕಾಣುತ್ತಿದೆ. ಅದರಲ್ಲಿ ಸಮನ್ವಯವೇ ಕಂಡು ಬರುತ್ತಿಲ್ಲ. ಅಸಂಘಟಿತ ರೀತಿಯಲ್ಲಿ ಲಸಿಕೆ ಕಂಡು ಹಿಡಿಯುವಲ್ಲಿ ಎಲ್ಲರೂ ಪ್ರಯತ್ನ ನಡೆಸುತ್ತಿದ್ದಾರೆ. ಇದು ತುಂಬಾ ಗೊಂದಲಮಯ ಪರಿಸ್ಥಿತಿಯಾಗಿದೆ ಎಂದು ರಿಚರ್ಡ್ ಹೋರ್ಟನ್ ಹೇಳಿದ್ದಾರೆ.

ನಾನು ಸ್ವಲ್ಪ ಆಶಾದಾಯಕನಾಗಿದ್ದೇನೆ

ನಾನು ಸ್ವಲ್ಪ ಆಶಾದಾಯಕನಾಗಿದ್ದೇನೆ

ಈ ವರ್ಷದ ಅಂತ್ಯದ ವೇಳೆಗೆ ಕೊರೊನಾ ರೋಗದ ವಿರುದ್ಧ ಲಸಿಕೆ ಕಂಡುಹಿಡಿಯುವಲ್ಲಿ ಜಗತ್ತು ಸಫಲವಾಗಬಹುದು ಎಂಬ ಆಶಾಭಾವನೆ ನನ್ನಲ್ಲಿ ಇದೆ. ಈ ವಿಷಯದಲ್ಲಿ ಪ್ರಪಂಚದಾದ್ಯಂತ ವೈದ್ಯರು, ವಿಜ್ಞಾನಿಗಳು ಮಾಡುತ್ತಿರುವ ಕೆಲಸ ಬಗ್ಗೆ ಸಾಕಷ್ಟು ಆಸಕ್ತಿದಾಯಕ ವಿಚಾರಗಳಿವೆ. ಆದರೆ, ನಾನು ಸ್ವಲ್ಪ ಆಶಾದಾಯಕನಾಗಿದ್ದೇನೆ. ಇದಕ್ಕೆ ಇನ್ನೂ ಹಲವಾರು ಕಾರಣಗಳಿರಬಹುದು ಎಂದು ರಿಚರ್ಡ್ ಹೋರ್ಟನ್ ಹೇಳಿದ್ದಾರೆ.

1.90 ಲಕ್ಷ ಜನ ಸಾವು

1.90 ಲಕ್ಷ ಜನ ಸಾವು

ಜಗತ್ತಿನಲ್ಲಿ ಕೊರೊನಾ ಮಹಾಮಾರಿಗೆ ಇಲ್ಲಿಯವರೆಗೆ 1.90 ಲಕ್ಷ ಜನ ಮೃತಪಟ್ಟಂತಾಗಿದೆ. ಸಾವಿನ ಸಂಖ್ಯೆ ನಿಲ್ಲುತ್ತಿಲ್ಲ. ಕೊರೊನಾಕ್ಕೆ ಮದ್ದು ಅರಿಯುವ ಬಗ್ಗೆ ವೈದ್ಯರು ವಿಜ್ಞಾನಿಗಳೂ ತೀವ್ರ ಶ್ರಮ ವಹಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಆದಷ್ಟು ಬೇಗ ಕಂಡುಕೊಳ್ಳಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+