ಮಾರ್ಕೆಟ್ ನಲ್ಲಿ ಹಸಿರು ಪಟಾಕಿ ಎಂಬುದೇ ಇಲ್ಲ; ದೆಹಲಿಯಲ್ಲಿ ಮಾರಾಟಗಾರರ ಅಳಲು
ನವದೆಹಲಿ, ನವೆಂಬರ್ 7: " 'ಹಸಿರು ಪಟಾಕಿ' ಅಂದರೇನು ಅಂತ ಸಹ ನಮಗೆ ಗೊತ್ತಿಲ್ಲ. ಮಾರ್ಕೆಟ್ ನಲ್ಲಿ ಆ ರೀತಿಯದು ಯಾವುದೂ ಇಲ್ಲ" ಎಂದು ಸದರ್ ಬಜಾರ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಎಸ್.ಛಬ್ರಾ ಬುಧವಾರ ಹೇಳಿದ್ದಾರೆ.
ದೆಹಲಿಯಲ್ಲಿ ಹಸಿರು ಪಟಾಕಿ (ಪರಿಸರಸ್ನೇಹಿ ಪಟಾಕಿ) ಮಾತ್ರ ಸಿಡಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಹಸಿರು ತರಕಾರಿಯೊಳಗೆ ಪಟಾಕಿಗಳನ್ನು ಇಟ್ಟು, ಆಕ್ರೋಶ ಹೊರ ಹಾಕಲಾಯಿತು.
ನಮಗೆ ಹಸಿರು ಪಟಾಕಿಗಳು ಅಂದರೇನು ಅಂತಲೇ ಗೊತ್ತಿಲ್ಲ. ನಾವು ಈ ಬಗ್ಗೆ ಸುಪ್ರೀಂ ಕೋರ್ಟ್ ನ ಕೇಳಿದಾಗ, ಅಂಥ ಪಟಾಕಿಗಳ ಪಟ್ಟಿ ನೀಡುವುದಾಗಿ ತಿಳಿಸಿದರು. ಆದರೆ ಅದಾಗಿ ಮರುದಿನಕ್ಕೆ, ಪಟಾಕಿ ಪಟ್ಟಿ ನೀಡುವುದಕ್ಕೆ ಮತ್ತೆರಡು ದಿನ ಬೇಕಾಗುತ್ತದೆ ಎಂದು ಹೇಳಿದರು. ಮಾರ್ಕೆಟ್ ನಲ್ಲಿ ಹಸಿರು ಪಟಾಕಿ ಅಂತ ಯಾವುದೂ ಇಲ್ಲ ಎಂದು ಛಬ್ರಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಈ ಆದೇಶವನ್ನು ಒಂದು ವರ್ಷದ ಹಿಂದೆಯೇ ಮಾಡಬೇಕಾಗಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications