ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ಅಬ್ದುಲ್ ಕಲಾಂ ನೆನಪಿನಲ್ಲಿ ಹುಟ್ಟಿತೊಂದು ಟ್ವಿಟ್ಟರ್ ಪುಟ

By Vanitha
|
Google Oneindia Kannada News

ನವದೆಹಲಿ, ಜುಲೈ, 28 : ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅಗಲಿಕೆಗೆ ಸಾಕಷ್ಟು ಜನ ನೊಂದು, ಹಲವಾರು ಮಂದಿ ಕಣ್ಣೀರು ಸುರಿಸಿದ್ದಾರೆ. ಇಡೀ ನಾಡು ದುಃಖತಪ್ತವಾಗಿದೆ. ಇದೀಗ ಯಾರೂ ಬೇಸರಿಸಿಕೊಳ್ಳುವ, ದಃಖಿಸುವುದು ಕೊಂಚ ಕಡಿಮೆಯಾಗಲಿದೆ.

ಹೇಂಗತೀರಾ? ಇನ್ನು ಮುಂದೆ ಎಲ್ಲರನ್ನೂ ಪ್ರೇರೇಪಿಸುವ ಕಲಾಂ ಅವರ ಉತ್ತಮ ಬೋಧನೆಗಳು, ಸ್ಪೂರ್ತಿದಾಯಕ ಸಾಲುಗಳು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಇನ್ನು ಮುಂದೆ ಹರಿದಾಡಲಿದೆ.ಅವರು ಸದಾ ನಮ್ಮೊಂದಿಗಿರುವಂತೆ ಮಾಡಲು ಅವರ ಆಪ್ತ ಸಹಾಯಕರು ಒಂದು ಯೋಜನೆ ರೂಪಿಸಿದ್ದಾರೆ.[ಲಕ್ಷಾಂತರ ಯುವಕರ ಪ್ರೇರಕ ಶಕ್ತಿ apjabdulkalam.com]

The new twitter account opened on the name of Abdul Kalam

ಹೊಸ ರೂಪದೊಂದಿಗೆ, 'ಇನ್ ಮೆಮೋರಿ ಆಫ್ ಡಾ. ಕಲಾಂ ಎಂಬ ಹೆಸರಿನಲ್ಲಿ ಡಾ. ಕಲಾಂ ಟ್ವಿಟ್ಟರ್ ಅಕೌಂಟ್ ಜಾರಿಯಲ್ಲಿರುತ್ತದೆ. ಅವರ ಅಮರ ನೆನಪುಗಳಿಗೆ ಅರ್ಪಿಸುತ್ತಾ, ಕಲಾಂ ಅವರ ಚಿಂತನೆಗಳು, ಆದರ್ಶಾತ್ಮಕ ನುಡಿಗಳು, ಬೋಧನೆಗಳು, ದೃಷ್ಟಿಕೋನಗಳನ್ನು ಈ ಅಧಿಕೃತ ಪುಟದಲ್ಲಿ ಪ್ರತಿಫಲಿಸಲಿದೆ ಎಂದು ಕಲಾಂ ಆಪ್ತ ಸಹಾಯಕ ಸೃಜನ್ ಪಾಲ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ಕಲಾಂ ಅವರ ಅಸಂಖ್ಯಾತ ಭಾಷಣಗಳು ಹಾಗೂ ವಿಂಗ್ಸ್ ಆಫ್ ಫೈರ್, ಇಂಡಿಯಾ 2020, ಇಗ್ನೈಟೆಡ್ ಮೈಂಡ್ ಮುಂತಾದ ಪುಸ್ತಕಗಳಿಂದ ಆಯ್ದ ಸ್ಫೂರ್ತಿದಾಯಕ ಹೇಳಿಕೆಗಳನ್ನು ಈ ಟ್ವಿಟ್ಟರ್ ಒಳಗೊಳ್ಳಲಿದೆ. ಸಿಂಗ್ ಅವರೊಂದಿಗೆ ಕಲಾಂ ಬರೆದ ಅಡ್ವಾಂಟೇಜ್ ಇಂಡಿಯಾ ಪುಸ್ತಕ ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ. ಕಳೆದ ರಾತ್ರಿಯಿಂದಲೂ 'ಕಲಾಂ ಸರ್' ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ ಎಂದು ಆಪ್ತ ಸಹಾಯಕರು ತಿಳಿಸಿದ್ದಾರೆ.

https://twitter.com/APJAbdulKalam

English summary
The new twitter account opened on the name of Abdul Kalam. Twitter account name is 'In Memory Of Dr. Abdul Kalam;. This account is provide all small information, thoughts, quotes about books of Abdul Kalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X