ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶೀಲ್ ಕುಮಾರ್ ಶಿಂಧೆ ಸರ್ವಾಧಿಕಾರಿಯೇ? ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಜ.21 : ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪೊಲೀಸರು ನಮ್ಮ ಪ್ರತಿಭಟನೆಗೆ ಸಹಕಾರ ನೀಡುತ್ತಿಲ್ಲ, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ವ್ಯಭಿಚಾರ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ದಿಲ್ಲಿ ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ವಹಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ರೈಲು ಭವನದ ಮುಂದೆ ಸೋಮವಾರದಿಂದ ಧರಣಿ ಆರಂಭಿಸಿದ್ದಾರೆ.

Arvind Kejriwal

ಮಂಗಳವಾರ ಬೆಳಗ್ಗೆ ಧರಣಿ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪೊಲೀಸರು ನಮ್ಮ ಧರಣಿಗೆ ಸಹಕಾರ ನೀಡುತ್ತಿಲ್ಲ. ಧರಣಿ ಸ್ಥಳದಿಂದ ನಮ್ಮನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. [ಧರಣಿ ನಿರತ ಸಿಎಂ ಕೇಜ್ರಿವಾಲ್ ಬಂಧಿಸಬೇಕೆ?]

ಪೊಲೀಸರು ಧರಣಿ ಸ್ಥಳದಲ್ಲಿ ನಮಗೆ ಮೊಬೈಲ್ ಶೌಚಾಲಯ ಉಪಯೋಗಿಸಲು ಅವಕಾಶ ನೀಡುತ್ತಿಲ್ಲ. ಇದರಿಂದ ಧರಣಿ ನಿರತರು ಸ್ಥಳದಿಂದ ಚದುರಿ ಹೋಗುವಂತೆ ಮಾಡುವುದು ಪೊಲೀಸರ ತಂತ್ರವಾಗಿದೆ. ನಾವು ಸ್ವತಃ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆದರೆ, ಅದನ್ನು ಇಡಲು ಪೊಲೀಸರು ಸ್ಥಳಾವಕಾಶ ನೀಡುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದರು. [ಧರಣಿ ಪ್ರೊಡಕ್ಷನ್ ಅರ್ಪಿಸುವ ಎಎಪಿ ಸರ್ಕಾರ]

ಪೊಲೀಸರ ಯಾವುದೇ ಕುತಂತ್ರಗಳಿಗೆ ಬಗ್ಗದೇ ನಾವು ಧರಣಿ ಮುಂದುವರೆಸುತ್ತೇವೆ ಎಂದು ಸಿಎಂ ಕೇಜ್ರಿವಾಲ್ ಹೇಳಿದರು. ನಾನು ನಿನ್ನೆ ರೈಲ್ವೆ ಭವನದ ಶೌಚಾಲಯವನ್ನು ಉಪಯೋಗಿಸುತ್ತಿದ್ದೆ. ಇಂದು ಪೊಲೀಸರು ಅದಕ್ಕೆ ಅಕವಾಶ ನೀಡುತ್ತಿಲ್ಲ. ಧರಣಿ ನಿರತರನ್ನು ಪೊಲೀಸರು ಪಾಕಿಸ್ತಾನದವರು, ಅಮೆರಿಕನ್ನರಂತೆ ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಧರಣಿ ಸ್ಥಳದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸುಶೀಲ್ ಕುಮಾರ್ ಶಿಂಧೆ ಯಾರು? ನಾನು ದೆಹಲಿ ಮುಖ್ಯಮಂತ್ರಿ ಎಲ್ಲಿ ಧರಣಿ ನಡೆಸಬೇಕು ಎಂದು ನಾನು ನಿರ್ಧರಿಸುತ್ತೇನೆ. ಸುಶೀಲ್ ಕುಮಾರ್ ಶಿಂಧೆ ಅವರ ಇಂತಹ ಸರ್ವಾಧಿಕಾರಿ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು.

English summary
Arvind Kejriwal alleges that police and Center are trying to disrupt protest. Police refused to let a mobile toilet remain in the protest venue, to make sure that people eventually leave the dharna. Then bursting out in anger, he questioned, "Has Sushil Kumar Shinde become a dictator?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X