ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಕನ್ನಡದಲ್ಲೂ ಸಿಗಲಿದೆ ಸುಪ್ರೀಂ ಕೋರ್ಟ್ ತೀರ್ಪು !

|
Google Oneindia Kannada News

ನವದೆಹಲಿ, ಜುಲೈ 03: ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಜಡ್ಜ್ ಮೆಂಟಿನ ಸಂಪೂರ್ಣ ಪ್ರತಿ ಕನ್ನಡ ಭಾಷೆಯಲ್ಲೂ ಲಭ್ಯವಾಗಲಿದೆ.

ಭಾರತದ ಆರು ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ಲಭ್ಯವಾಗಲಿದ್ದು, ಅದರಲ್ಲಿ ಕನ್ನಡವೂ ಸೇರಿರುವುದು ವಿಶೇಷ. ಕನ್ನಡದ ಜೊತೆ ತೆಲುಗು, ಹಿಂದಿ, ಅಸ್ಸಾಮಿ, ಮರಾಠಿ, ಓಡಿಯಾ ಭಾಷೆಗಳಲ್ಲಿ ತೀರ್ಪು ಲಭ್ಯವಾಗಲಿದೆ.

ಕನ್ನಡದಲ್ಲಿ ಬರಲು ಶುರುವಾಯ್ತು ಜಗತ್ತಿನ ಸಕಲ ಜ್ಞಾನ-ಮನರಂಜನೆ ಕನ್ನಡದಲ್ಲಿ ಬರಲು ಶುರುವಾಯ್ತು ಜಗತ್ತಿನ ಸಕಲ ಜ್ಞಾನ-ಮನರಂಜನೆ

ಎಲ್ಲವೂ ಅಂದುಕೊಂಡಂತೆ ಆದರೆ ಈ ತಿಂಗಳ ಕೊನೆಯಿಂದಲೇ ತೀರ್ಪು ಕನ್ನಡದಲ್ಲಿ ದೊರೆಯಲಿದೆ.

Supreme Court judgements will be available in 6 languages including Kannada

2017 ರಲ್ಲಿ ಕೊಚ್ಚಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯ ಪಟ್ಟಿದ್ದರು. ಅವರ ಆಶಯದಂತೆಯೇ ಇದೀಗ ಅಂಥ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮಾಹಿತಿ ನೀಡಿದ್ದಾರೆ.

ಇಷ್ಟು ದಿನ ತೀರ್ಪುಗಳು ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಾಗುತ್ತಿತ್ತು. ಇದರಿಂದ ಪ್ರಾದೇಶಿಕ ಭಾಷೆಗಳನ್ನು ಮಾತ್ರ ಬಲ್ಲ ಜನರಿಗೆ ತೀರ್ಪನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ರಾಷ್ಟ್ರಪತಿ ಕೋವಿಂದ್ ಅವರೇ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

ರಾಜ್ಯದ ಮೊದಲ ಕನ್ನಡ ವಿಜ್ಞಾನ ಕಾಲೇಜಿನತ್ತ ಪೋಷಕರ ನಿರಾಸಕ್ತಿ ರಾಜ್ಯದ ಮೊದಲ ಕನ್ನಡ ವಿಜ್ಞಾನ ಕಾಲೇಜಿನತ್ತ ಪೋಷಕರ ನಿರಾಸಕ್ತಿ

ಈ ತಿಂಗಳಾಂತ್ಯದ ಹೊತ್ತಿಗೆ ಅದು ಜಾರಿಗೆ ಬರಲಿದೆ. ಆಯಾ ರಾಜ್ಯಗಳ ಹೈಕೋರ್ಟಿನಿಂದ ಬರುವ ಪ್ರಕರಣಗಳ ಪ್ರಮಾಣ ಮತ್ತು ಆ ರಾಜ್ಯದಲ್ಲಿ ಆಡುವ ಭಾಷೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

English summary
Judgments of the Supreme Court of India will soon be available in six Indian languages, that is Kannada, Hindi, Telugu, Assames, Marathi, Odia. It will be implemented in SC website by the end of this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X