ಶಬರಿಮಲೆ ತೀರ್ಪು: ಸುಪ್ರೀಂ ನಲ್ಲಿ ಇಂದು ಮೇಲ್ಮನವಿ ವಿಚಾರಣೆ
ತಿರುವನಂತಪುರಂ, ಫೆಬ್ರವರಿ 06: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಬುಧವಾರ ನಡೆಯಲಿದೆ.
800 ವರ್ಷಗಳಿಂದ ಮಹಿಳೆಯರ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್ 29 ರಂದು ತೆರವುಗೊಳಿಸಿ ಮಹತ್ವದ ತೀರ್ಪು ನೀಡಿತ್ತು.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು.

ಆದರೆ ಸುಪ್ರೀಂ ತೀರ್ಪಿನ ನಂತರ ಹಲವು ಮಹಿಳೆಯರು ಪೊಲೀಸ್ ಭದ್ರತೆಯ ನಡುವೆ ದೇವಾಲಯ ಪ್ರವೇಶಿಸಿ ಇತಿಹಾಸ ಬರೆದರು.
ಆದರೆ ಎಂಟು ನೂರು ವರ್ಷಗಳಿಂದ ಪಾಲಿಸಕೊಂಡು ಬಂದ ಸಂಪ್ರದಾಯವನ್ನು ನ್ಯಾಯಾಂಗದ ಅಡಿಯಲ್ಲಿ ವಿಚಾರಣೆಗೊಳಪಡಿಸುವುದು ಸರಿಯಲ್ಲ, ಇದು ಧಾರ್ಮಿಕ ನಂಬಿಕೆ ಸಂಬಮಧಿಸಿದ್ದು, ಇಲ್ಲಿ ಸಮಾನತೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ದೂರಿ, ಸುಪ್ರೀಂ ಕೋರ್ಟಿನ ತೀರ್ಪಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಸುಪ್ರೀಂ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾದ ಈ ಮೇಲ್ಮನವಿ ವಿಚಾರಣೆ ಇಂದು ನಡೆಯಲಿದೆ.












Click it and Unblock the Notifications