ಅರವಿಂದ ಕೇಜ್ರಿವಾಲ್ ಯಶಸ್ಸಿನ ಪ್ರೇರಕ ಶಕ್ತಿ ಸುನೀತಾ

ನವದೆಹಲಿ, ಫೆ. 11: 'ಪ್ರತಿ ಗಂಡಿನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರುತ್ತಾಳೆ' ಎಂಬ ಗಾದೆ ಮಾತಿದೆ. ಈ ಮಾತು ಬಹುತೇಕ ಸತ್ಯವೂ ಹೌದು. ಆದ್ದರಿಂದಲೇ ಜಗತ್ತಿನ ಪ್ರತಿ ದೇಶದಲ್ಲೂ ನೇತಾರನ ಪತ್ನಿಗೆ ಅಷ್ಟೇ ಮಹತ್ವದ ಸ್ಥಾನವಿರುತ್ತದೆ. ಎಲ್ಲಿಗೇ ಪ್ರವಾಸಕ್ಕೆ ಹೋಗಲಿ ಜೊತೆಯಲ್ಲಿ ಪತ್ನಿ ಇದ್ದರೇ ಅವರಿಗೊಂದು ಶೋಭೆ.

ಹಲವರು ಪತ್ನಿಯನ್ನು ಬಹಿರಂಗವಾಗಿ ಶ್ಲಾಘಿಸಲ್ಲ. ಅರವಿಂದ ಕೇಜ್ರಿವಾಲ್‌ರಂತ ಕೆಲವರು ಮಾತ್ರ ತುಂಬು ಹೃದಯದಿಂದ ಎಲ್ಲರೆದುರು ಪ್ರೀತಿ ಪ್ರದರ್ಶಿಸಬಲ್ಲರು. ದೆಹಲಿಯಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಗೆಲುವು ಸಾಧಿಸಿದ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಈಗ ಎಲ್ಲರ ಗಮನ ಸೆಳೆದಿದ್ದಾರೆ.

sunita

ತಮ್ಮ ಪ್ರತಿ ಹೋರಾಟದಲ್ಲೂ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಪತ್ನಿಗೆ ಅರವಿಂದ ಕೇಜ್ರಿವಾಲ್ ಟ್ವಿಟ್ಟರ್ ಮೂಲಕ ಕೃತಜ್ಞತೆ ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದ ತಕ್ಷಣ ಪತ್ನಿಯನ್ನು ಎಲ್ಲರೆದುರು ಬಿಗಿದಪ್ಪಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಪತ್ನಿ ಇಲ್ಲದಿದ್ದರೆ ನನ್ನಿಂದ ಏನನ್ನೂ ಸಾಧಿಸುವುದು ಸಾಧ್ಯವಿರಲಿಲ್ಲ ಎಂದಿದ್ದಾರೆ. [ಮೋದಿ, ಷಾ ಮಾಡಿದ ಯಡವಟ್ಟು]

ಅವರ ಹೆಸರು ಸುನೀತಾ ಕೇಜ್ರಿವಾಲ್. ಪತಿ ಅರವಿಂದ್‌ರಂತೆ ಸುನೀತಾ ಕೂಡ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ. ಆದರೆ, ಅವರ ಮುಖದಲ್ಲಿ ಅಧಿಕಾರಿಯೋರ್ವರ ಗತ್ತಾಗಲಿ, ಶ್ರೀಮಂತ ಮಹಿಳೆಯ ಆಡಂಬರವಾಗಲಿ ಇಲ್ಲ. ಅರವಿಂದರಂತೆ ಸುನೀತಾ ಕೂಡ ಸಾದಾ ಸೀದಾ ವ್ಯಕ್ತಿ.

hug

ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿದ್ದ ಅರವಿಂದ ಕೇಜ್ರಿವಾಲ್ ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜಿನಾಮೆ ನೀಡಿ ಸಮಾಜ ಸೇವೆಗೆ ಧುಮುಕಿದಾಗ ಪತ್ನಿಯಾಗಿ ಬೆಂಬಲ ನೀಡಿದವರು ಸುನೀತಾ. ಈ ಮೂಲಕ ಓರ್ವ ಮಹಿಳೆ ಎಂತಹ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲರು ಎಂಬುದಕ್ಕೆ ಮಾದರಿಯಾಗಿದ್ದಾರೆ. [ಜಾಗೃತ ದೆಹಲಿಗರ ಒಗ್ಗಟ್ಟು]

ಅರವಿಂದ ಕೇಜ್ರಿವಾಲ್ ಅವರನ್ನು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆ ಅಮೆರಿಕದ ಬರಾಕ್ ಒಬಾಮ ಅವರಿಗೆ ಹೋಲಿಸಿ ಶ್ಲಾಘಿಸಿದೆ. ಬರಾಕ್ ಒಬಾಮ ಅವರು ಅಮೆರಿಕ ಚುನಾವಣೆಯಲ್ಲಿ ಎರಡನೇ ಬಾರಿ ಗೆದ್ದು ಅಧ್ಯಕ್ಷ ಪಟ್ಟಕ್ಕೇರಿದಾಗ ಮೊದಲು ತಮ್ಮ ಪತ್ನಿಯನ್ನು ಆಲಂಗಿಸಿದ್ದರು. ಕೇಜ್ರಿವಾಲ್ ಕೂಡ ಗೆದ್ದಾಗ ಮಾಡಿದ ಮೊದಲ ಕೆಲಸ ಪತ್ನಿಯನ್ನು ಬಿಗಿದಪ್ಪಿ ಕೃತಜ್ಞತೆ ಹೇಳಿದ್ದು. [ಕೇಜ್ರಿವಾಲ್ ಸಿನಿಮಾ ರೆಡಿ]

ಅರವಿಂದ ಕೇಜ್ರಿವಾಲ್ ಇಂದು ಜಗತ್ತಿನಾದ್ಯಂತ ಮನೆ ಮಾತಾಗಿದ್ದಾರೆ. ಆದರೆ, ಅವರ ಪ್ರೇರಕ ಶಕ್ತಿ ಸುನೀತಾ ಮಾತ್ರ ಮಾಧ್ಯಮಗಳಿಂದ ಸಂಪೂರ್ಣ ದೂರವುಳಿದು ಮಕ್ಕಳು, ಪತಿ ಹಾಗೂ ಅತ್ತೆ, ಮಾವ ಸೇರಿದ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಎಲೆ ಮರೆಯ ಕಾಯಿಯಂತೆ ಉಳಿದು ಪತಿಯ ಸಮಾಜ ಸೇವೆಗೆ ಕೌಟುಂಬಿಕ ಜವಾಬ್ದಾರಿ ಅಡ್ಡಿ ಬರದಂತೆ ನೋಡಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+