ಸುನಂದಾ ಪುಷ್ಕರ್ ಸಾವಿನ ಕಾರಣ ಇನ್ನೂ ನಿಗೂಢ

ನವದೆಹಲಿ, ಜ.20: ಕೇಂದ್ರ ಸಚಿವ ಶಶಿ ತರೂರ್ ಅವರು ತನ್ನ ಪತ್ನಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಇದರ ಹಿಂದಿನ ಸತ್ಯಾಸತ್ಯತೆಗಳನ್ನು ಜಗತ್ತಿಗೆ ತಿಳಿಯಬೇಕಿದೆ ತ್ವರಿತವಾಗಿ ತನಿಖೆ ಸತ್ಯ ಬಹಿರಂಗಗೊಳಿಸಿ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯವರಿಗೆ ಮನವಿ ಮಾಡಿದ ಬೆನ್ನಲ್ಲೇ ಏಮ್ಸ್ ನಿಂದ ವೈದ್ಯಕೀಯ ವರದಿ ಹೊರಬಿದ್ದಿದೆ.

ಆದರೆ, ಸುನಂದಾ ಪುಷ್ಕರ್ ಅವರ ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ದೆಹಲಿಯ ಲೀಲಾ ಪ್ಯಾಲೇಸ್ ನ ರೂಮಿನಲ್ಲಿ ಸಿಕ್ಕಿರುವ ಸಾಕ್ಷಿ, ಸುನಂದಾ ಅವರ ಶವದ ಮರಣೋತ್ತರ ಪರೀಕ್ಷೆ ವರದಿ, ಅತಿಯಾದ ಮಾತ್ರೆ ಸೇವನೆಯೇ ಕಾರಣ ಎಂಬ ತಕ್ಷಣದ ವರದಿ ನಡುವೆ ಈ ಪ್ರಕರಣದ ಅಪ್ದೇಡ್ ಗಳನ್ನು ಇಲ್ಲಿ ಓದುತ್ತಿರಿ:

Updates on Sunanda's death: No trace of alcohol in body: AIIMS report

ಏಮ್ಸ್ ವರದಿ : ಮದ್ಯ ಸೇವಿಸಿಲ್ಲ, ಮಾತ್ರೆ ಸೇವಿಸಿದ್ದಾರೆ: ದೆಹಲಿಯ ಏಮ್ಸ್ ವೈದ್ಯರ ಪ್ರಕಾರ ಸುನಂದಾ ಅವರ ಅಟಾಪ್ಸಿ ನಡೆಸಿದ ಮೇಲೆ ಆಕೆ ಆಲ್ಕೋಹಾಲ್ ಸೇವಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ, ಮಾನಸಿಕ ಒತ್ತಡ ನಿವಾಕರ ಸೆಡಟಿವ್ ಸೈಕೋಆಕ್ಟಿವ್ ಡ್ರಗ್ Alprazolam ಸೇವಿಸಿರುವುದು ಪತ್ತೆಯಾಗಿದೆ. ಹೋಟೆಲ್ ರೂಮಿನಲ್ಲೂ ಕೂಡಾ Alprax ನ ಒಂದು ಸ್ಟ್ರಿಪ್ ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ಅಜಾಗರೂಕತೆಯಿಂದ ಕೂಡಿದ ಊಹಾಪೋಹ ವರದಿಗಳನ್ನು ಓದಿ ತಾನು ಗಾಬರಿಗೊಂಡಿರುವುದಾಗಿ ತರೂರ್ ಪ್ರತಿಕ್ರಿಯಿಸಿದ್ದಾರೆ. ಏತನ್ಮಧ್ಯೆ ತರೂರ್‌ರ ಹೇಳಿಕೆಯನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟರು ಇಂದು ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+