ಡಿಕೆ ಶಿವಕುಮಾರ್ ಭೇಟಿ ಮಾಡದೆ ಹೊರಟ ಸೋನಿಯಾ: ಕಾರಣಗಳು

Recommended Video

      ಜೈಲೆಗೆ ಹೋದ್ರು ಡಿಕೆಶಿಯನ್ನು ಭೇಟಿ ಮಾಡದ ಸೋನಿಯಾ ಗಾಂಧಿ | Oneindia Kannada

      ನವದೆಹಲಿ, ಸೆಪ್ಟೆಂಬರ್ 23: ಡಿಕೆ ಶಿವಕುಮಾರ್ ಬೆಂಬಲವಾಗಿ ನಾನಿದ್ದೇನೆ ಎಂದಿದ್ದ ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ಬಂದರೂ ಅವರನ್ನು ಭೇಟಿ ಮಾಡದೆ ಹಿಂದಿರುಗಿದ್ದಾರೆ.

      ಒಂದೇ ಬಾರಿಗೆ ಒಬ್ಬರನ್ನು ಮಾತ್ರ ಭೇಟಿ ಮಾಡಲು ತಿಹಾರ್ ಜೈಲಿನಲ್ಲಿ ಅವಕಾಶ ವಿರುವುದರಿಂದ ಸೋನಿಯಾ ಗಾಂಧಿ ಕೇವಲ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದಾರೆ. ಇನ್ನೊಂದು ಬಾರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

      ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸೋನಿಯಾ ಗಾಂಧಿಯವರು ತಿಹಾರ್ ಜೈಲಿಗೆ ಭೇಟಿ ನೀಡಿದ್ದರು. ಆದರೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಮಾತ್ರ ಭೇಟಿ ಮಾಡಿ ಹಿಂದಿರುಗಿದ್ದಾರೆ. ಅದೇ ಜೈಲಿನಲ್ಲಿ ಡಿಕೆ ಶಿವಕುಮಾರ್ ಇದ್ದರೂ ಕೂಡ ಅವರನ್ನು ಭೇಟಿಯಾಗಿಲ್ಲ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಕಾರಣವೇನು ಎಂಬುದನ್ನು ನೋಡೋಣ.

      ಚಿದಂಬರಂ ಕೇಂದ್ರ ಸಚಿವರಾಗಿದ್ದರು, ಡಿಕೆಶಿ ರಾಜ್ಯ ಸಚಿವರಾಗಿದ್ದವರು

      ಚಿದಂಬರಂ ಕೇಂದ್ರ ಸಚಿವರಾಗಿದ್ದರು, ಡಿಕೆಶಿ ರಾಜ್ಯ ಸಚಿವರಾಗಿದ್ದವರು

      ಚಿದಂಬರಂ ಕೇಂದ್ರ ಸಚಿವರಾಗಿದ್ದವರು, ಸೋನಿಯಾ ಗಾಂಧಿಯವರೊಂದಿಗೆ ಹೆಚ್ಚು ಒಡನಾಟವೂ ಇತ್ತು, ಹತ್ತಿರದಿಂದ ಬಲ್ಲವರು ಹಾಗಾಗಿ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದಾರೆ. ಡಿಕೆ ಶಿವಕುಮಾರ್ ಕೇವಲ ರಾಜ್ಯ ಸಚಿವರಾಗಿದ್ದವರು ಎನ್ನುವ ಭಾವನೆಯೂ ಇದ್ದಿರಬಹುದು.

      ಒಂದು ಬಾರಿಗೆ ಒಬ್ಬರನ್ನೇ ಭೇಟಿ ಮಾಡಲು ಅವಕಾಶ

      ಒಂದು ಬಾರಿಗೆ ಒಬ್ಬರನ್ನೇ ಭೇಟಿ ಮಾಡಲು ಅವಕಾಶ

      ಒಂದೇ ಬಾರಿಗೆ ಒಬ್ಬರನ್ನು ಮಾತ್ರ ಭೇಟಿ ಮಾಡಲು ತಿಹಾರ್ ಜೈಲಿನಲ್ಲಿ ಅವಕಾಶ ವಿರುವುದರಿಂದ ಸೋನಿಯಾ ಗಾಂಧಿ ಕೇವಲ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದಾರೆ. ಇನ್ನೊಂದು ಬಾರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

      ಚಿದಂಬರಂ ಪ್ರಕರಣವೇ ಬೇರೆ, ಡಿಕೆಶಿ ಪ್ರಕರಣವೇ ಬೇರೆ

      ಚಿದಂಬರಂ ಪ್ರಕರಣವೇ ಬೇರೆ, ಡಿಕೆಶಿ ಪ್ರಕರಣವೇ ಬೇರೆ

      2014ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ, ಪಿ ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ, ಮೀಡಿಯಾ ಕುಳಗಳಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಒಡೆತನದಲ್ಲಿದ್ದ ಐಎನ್ಎಕ್ಸ್ ಮೀಡಿಯಾ ಮಲೇಶಿಯಾದ ಕಂಪನಿಯಿಂದ 305 ಕೋಟಿ ರೂಪಾಯಿಗಳನ್ನು ಪಡೆದಿತ್ತು. ಆದರೆ, ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯಿಂದ 4.62 ಕೋಟಿ ರೂಪಾಯಿ ಹೂಡಿಕೆ ಮಾಡಲು ಮಾತ್ರ ಅನುಮತಿ ನೀಡಲಾಗಿತ್ತು. ಡಿಕೆ ಶಿವಕುಮಾರ್ ಅವರ ಮೇಲೆ ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಕಬಳಿಕೆ ಆರೋಪಗಳಿವೆ.

      ಕೇವಲ ಚಿದಂಬರಂ ಮಾತ್ರ ಭೇಟಿಯಾದ ಸೋನಿಯಾ

      ಕೇವಲ ಚಿದಂಬರಂ ಮಾತ್ರ ಭೇಟಿಯಾದ ಸೋನಿಯಾ

      ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ತೆರಳಿ ಕೇವಲ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿ ವಾಪಾಸಾಗಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿಲ್ಲ ಎನ್ನುವುದು ಆಶ್ಚಯ ತಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+