'ಸಂಸತ್ ನಿಂದ ಓಡಿಹೋದ ಮೋದಿಯಿಂದ ಪಂಜಾಬ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ'

ನವದೆಹಲಿ, ಜನವರಿ 3: ನಮ್ಮ ಪ್ರಧಾನಿಗಳು ಸಂಸತ್ ನಿಂದ ಓಡಿಹೋದಂತಿದೆ. ಮತ್ತು ರಫೇಲ್ ಬಗ್ಗೆ ತೆರೆದ ಪುಸ್ತಕದ ತಮ್ಮದೇ ಪರೀಕ್ಷೆ ಬಿಟ್ಟು ಹೋಗಿ, ಪಂಜಾಬ್ ನ ಲವ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ತೆರಳಿದ್ದಾರೆ ಎಂದು ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.

ನಾನು ನಿನ್ನೆ ಕೇಳಿದ ನಾಲ್ಕು ಪ್ರಶ್ನೆಗಳನ್ನು ಅಲ್ಲಿನ ವಿದ್ಯಾರ್ಥಿಗಳು ಸಹ ಕೇಳಿ, ಅದಕ್ಕೆ ಉತ್ತರ ಪಡೆಯಬೇಕು ಎಂದು ಗೌರವಯುತವಾಗಿ ಮನವಿ ಮಾಡುತ್ತೇನೆ ಎಂದಿದ್ದಾರೆ. ಅಂದಹಾಗೆ ರಾಹುಲ್ ಗಾಂಧಿ ಅವರು ರಫೇಲ್ ಯುದ್ಧ ವಿಮಾನದ ಖರೀದಿ ಸಂಖ್ಯೆ, ಅದರ ಬೆಲೆ, ರಕ್ಷಣಾ ಇಲಾಖೆಯು ಆ ಬಗ್ಗೆ ಎತ್ತಿದ್ದ ಆಕ್ಷೇಪಣೆ ಕುರಿತು ಪ್ರಶ್ನೆ ಮಾಡುವಂತೆ ಹೇಳಿದ್ದಾರೆ.

ಸಂಸತ್ ನ ಅಧಿವೇಶದಲ್ಲಿ ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಹುತೇಕ ಸಮಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನೆ ಮಾಡುವುದಕ್ಕೆ ಮೀಸಲಿಟ್ಟರು. "ನಾಳೆ ಪ್ರಧಾನಮಂತ್ರಿ ಅವರಿಗೆ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಸತ್ ನಲ್ಲಿ ತೆರೆದ ಪುಸ್ತಕದ ಪರೀಕ್ಷೆ ಇದೆ. ಆ ಪರೀಕ್ಷೆಯ ಪ್ರಶ್ನೆಯನ್ನು ಮುಂಚಿತವಾಗಿಯೇ ನೀಡಲಾಗುತ್ತಿದೆ

Seems PM fled parliament to lecture students in Punjab, said AICC chief Rahul Gandhi

"ಭಾರತೀಯ ವಾಯು ಸೇನೆಗೆ ಬೇಕಿದ್ದ 126 ಯುದ್ಧ ವಿಮಾನದ ಬದಲು 36 ಖರೀದಿ ಏಕೆ? ಇನ್ನು 560 ಕೋಟಿ ರುಪಾಯಿ ಇದ್ದ ಬೆಲೆ 1600 ಕೋಟಿಗೆ ಏರಿಕೆ ಆಗಿದ್ದು ಏಕೆ? HAL ಬದಲಿಗೆ AA (ಅನಿಲ್ ಅಂಬಾನಿ) ಕಂಪನಿ ಬಂದದ್ದು ಏಕೆ? ಇದಕ್ಕೆಲ್ಲ ಅವರೇ ಉತ್ತರ ಹೇಳುತ್ತಾರಾ ಅಥವಾ ಅವರ ಬದಲಿಗೆ ಬೇರೆ ಯಾರನ್ನಾದರೂ ಕಳಿಸುತ್ತಾರಾ?" ಎಂದು ರಾಹುಲ್ ಗಾಂಧಿ ಬುಧವಾರವೇ ಕೇಳಿದ್ದರು.

ಆದರೆ, ರಾಹುಲ್ ಗಾಂಧಿ ಮೂರನೇ ಪ್ರಶ್ನೆಯನ್ನೇ ಮರೆತಿದ್ದರು. ಅದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ರಕ್ಷಣಾ ಸಚಿವೆ, ತರಗತಿಯಲ್ಲಿ ಫೇಲ್ ಆದ ವಿದ್ಯಾರ್ಥಿ, ಹೊರಗಡೆ ಸವಾಲು ಎಸೆದಂತೆ ಇದೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+