• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ತಾಸು ತಡವಾದರೂ ಪಾಕಿಸ್ತಾನದಿಂದ ದೆಹಲಿ ತಲುಪಿದ ಸಂಜೋತಾ ಎಕ್ಸ್‌ಪ್ರೆಸ್

|

ನವದೆಹಲಿ, ಆಗಸ್ಟ್ 9: ಪಾಕಿಸ್ತಾನ ಅತ್ತಾರಿಯಿಂದ ಹೊರಟಿದ್ದ ಸಂಜೋತಾ ಎಕ್ಸ್‌ಪ್ರೆಸ್ ಅಂತೂ ದೆಹಲಿ ಬಂದು ತಲುಪಿದೆ.

ಗುರುವಾರ ಹೊರಟಿದ್ದ ಸಂಜೋತಾ ಎಕ್ಸ್‌ಪ್ರೆಸ್ ನ್ನು ಮಾರ್ಗಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಸಂಜೌತಾ ಎಕ್ಸ್‌ಪ್ರೆಸ್‌ನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನ ರೈಲ್ವೆ ಸಚಿವ ಪರಶಿದ್ ಅಹ್ಮದ್ ಖಾನ್ ಗುರುವಾರ ಟ್ವೀಟ್ ಮಾಡಿದ್ದರು.

ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35 ಎ ಕುರಿತು ಭಾರತದ ನಿರ್ಧಾರದ ನಂತರ ಸಂಜೋತಾ ಎಕ್ಸ್‌ಪ್ರೆಸ್ ಮತ್ತೆ ಚರ್ಚೆಯ ವಿಷಯವಾಗಿದೆ.

ಸಂಜೋತಾ ಎಕ್ಸ್ ಪ್ರೆಸ್ ಸೇವೆ ಶಾಶ್ವತವಾಗಿ ರದ್ದು! ಯುದ್ಧದ ಮುನ್ಸೂಚನೆಯೇ?

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಚರಿಸುತ್ತಿರುವ ಸಂಜೋತಾ ಎಕ್ಸ್‌ಪ್ರೆಸ್ ಅತ್ತಾರಿಯಿಂದ ಸುಮಾರು ಐದು ಗಂಟೆಗಳ ವಿಳಂಬವಾಗಿ ಹೊರಟಿದ್ದು, ಇಂದು ಬೆಳಿಗ್ಗೆ 8 ಗಂಟೆಗೆ ದೆಹಲಿಯನ್ನು ತಲುಪಿತು. ಇದು ಅತ್ತಾರಿಯಿಂದ ದೆಹಲಿಗೆ ಒಂದೂವರೆ ಗಂಟೆಗೆ ಹೊರಟಿತ್ತು.

ದೆಹಲಿ ಮತ್ತು ಲಾಹೋರ್‌ಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಡಿಯ ಎರಡೂ ಬದಿಗಳಲ್ಲಿ ನೂರಾರು ಪ್ರಯಾಣಿಕರು ಭದ್ರತಾ ಅನುಮತಿಗಾಗಿ ಹಲವು ಗಂಟೆಗಳ ಕಾಲ ಕಾಯುತ್ತಿದ್ದರು. ಹಲವಾರು ಗಂಟೆಗಳ ನಂತರ, ಲಾಹೋರ್‌ಗೆ ಸಂಜೋತಾ ಎಕ್ಸ್‌ಪ್ರೆಸ್ ಸಂಜೆ 6.41 ಕ್ಕೆ ಅತ್ತಾರಿಯಿಂದ ಹೊರಟಿತು.

ಸಂಜೋತಾ ಎಕ್ಸ್‌ಪ್ರೆಸ್ ಮೂಲಕ ಒಟ್ಟು 117 ಪ್ರಯಾಣಿಕರು ದೆಹಲಿಯನ್ನು ತಲುಪಿದ್ದಾರೆ. ಇವರಲ್ಲಿ 76 ಭಾರತೀಯರು ಮತ್ತು 41 ಪಾಕಿಸ್ತಾನಿ ಪ್ರಜೆಗಳು ಸೇರಿದ್ದಾರೆ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಸಂಜೋತಾ ಎಕ್ಸ್‌ಪ್ರೆಸ್ ಅನ್ನು ವಾಗಾ ಗಡಿಯಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಮುಂದೆ ಸಾಗಲು ಅವಕಾಶ ಮಾಡಿಕೊಡಲಾಯಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಗೊಳಿಸುವ ಭಾರತದ ಕ್ರಮವನ್ನು ಉಲ್ಲೇಖಿಸಿ ಪಾಕಿಸ್ತಾನವು ಭಾರತೀಯ ಹೈಕಮಿಷನರ್ ಅವರನ್ನು ವಾಪಸ್ ಕಳುಹಿಸಲಾಗುವುದು ಮತ್ತು ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೆ ನೀಡಿದೆ.

English summary
Samjhauta Express Reached Delhi After 5 Hours Delay, The Samjhauta Express train, plying between India and Pakistan, reached the national capital on Friday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X