ವಿಶ್ವದ ಮೊದಲ ಕೋವಿಡ್-19 ಲಸಿಕೆಯ ಉತ್ಪಾದನೆ ಆರಂಭಿಸಿದ ರಷ್ಯಾ
ನವದೆಹಲಿ, ಆಗಸ್ಟ್ 15: ವಿಶ್ವದ ಮೊದಲ ಕೊರೊನಾವೈರಸ್ ಲಸಿಕೆ ಘೋಷಿಸಿದ ಬಳಿಕ ರಷ್ಯಾ ಲಸಿಕೆಯ ಉತ್ಪಾದನೆಯನ್ನು ಆರಂಭಿಸಿದೆ ಎಂದು ವರದಿಯೊಂದು ತಿಳಿಸಿದೆ.
Recommended Video
ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ 74 ನೇ ಸ್ವಾತಂತ್ರ್ಯ ದಿನದಂದು ಸಶಸ್ತ್ರ ಪಡೆಗಳಿಗೆ ಗೌರವ. | Oneindia Kannada
''ಗಮೆಲಿಯಾ ಸೈಂಟಿಫಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸಾಂಕ್ರಾಮಿಕ ಕೊರೊನಾವೈರಸ್ ಸೋಂಕಿನ ವಿರುದ್ಧ ಲಸಿಕೆ ಉತ್ಪಾದನೆ ಪ್ರಾರಂಭವಾಗಿದೆ" ಎಂದು ಸ್ಪುಟ್ನಿಕ್ ನ್ಯೂಸ್ ವರದಿ ಮಾಡಿದೆ.
ರಷ್ಯಾದ ಮೊದಲ ಕೊರೊನಾವೈರಸ್ ಲಸಿಕೆಯನ್ನು ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಸ್ಪುಟ್ನಿಕ್-ವಿ (ವ್ಯಾಕ್ಸಿನ್) ಎಂಬ ಹೆಸರಿನಲ್ಲಿ ರಷ್ಯಾ ಕೊರೊನಾ ಲಸಿಕೆಯನ್ನು ಘೋಷಿಸಿದೆ. ಆದರೆ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್-ವಿ ಲಸಿಕೆಗೆ ಸಂಬಂಧಿಸಿದ ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಗಳು ಲಭ್ಯವಿಲ್ಲ. ಅಲ್ಲದೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿರುವಾಗಲೇ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ.












Click it and Unblock the Notifications