ಕೊರೊನಾ ವೈರಸ್ ನಿಂದ ನಿವೃತ್ತ ನ್ಯಾ.ಎ.ಕೆ.ತ್ರಿಪಾಠಿ ಸಾವು
ನವದೆಹಲಿ, ಮೇ.02: ನೊವೆಲ್ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದ ಛತ್ತೀಸ್ ಗಢ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಕೆ.ತ್ರಿಪಾಠಿ ಶನಿವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
62 ವರ್ಷದ ನಿವೃತ್ತ ನ್ಯಾ.ಎ.ಕೆ.ತ್ರಿಪಾಠಿ ಅವರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಕಳದೆ ಏಪ್ರಿಲ್.02ರಂದು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ತ್ರಿಪಾಠಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಒಂದೇ ದಿನ 2293 ಪ್ರಕರಣಗಳು: ಟಾಪ್ 10 ರಾಜ್ಯಗಳು ಯಾವುವು?
ನಿವೃತ್ತ ನ್ಯಾ. ಎ.ಕೆ. ತ್ರಿಪಾಠಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರದ ಹಿನ್ನೆಲೆ ಇತ್ತೀಚಿಗೆ ವೆಂಟಿಲೇಟರ್ ಕೂಡಾ ಅಳವಡಿಸಲಾಗಿತ್ತು.

ನಿವೃತ್ತ ನ್ಯಾ.ಎ.ಕೆ.ತ್ರಿಪಾಠಿ ಪುತ್ರಿ ಆರೋಗ್ಯದಲ್ಲಿ ಚೇತರಿಕೆ:
ಮಹಾಮಾರಿ ನೊವೆಲ್ ಕೊರೊನಾ ವೈರಸ್ ಸೋಂಕು ನಿವೃತ್ತ ನ್ಯಾ. ಎ.ಕೆ.ತ್ರಿಪಾಠಿ ಜೊತೆಗೆ ಅವರ ಪುತ್ರಿಗೂ ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿತ್ತು. ಅವರನ್ನು ಕೂಡ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪುತ್ರಿಯ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯಕೀಯ ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications