ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ವಸ್ತುಗಳನ್ನು ಬಹಿಷ್ಕರಿಸಿ: ಜನತೆಯಲ್ಲಿ ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಮನವಿ

|
Google Oneindia Kannada News

ಲಡಾಖ್‌ನಲ್ಲಿ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಜನತೆಯಲ್ಲಿ ಮನವಿ ಮಾಡಿದ್ದಾರೆ.

Recommended Video

BJP High Command ignores CM Yeddyurappa in election Council | Oneindia Kannada.

ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲಿನ ಬಿಐಎಸ್ ಗುಣಮಟ್ಟದ ನಿಯಮಗಳನ್ನು ಕೇಂದ್ರವು ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ ಎಂದು ಹೇಳಿದರು. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಾಸ್ವಾನ್ ಅವರು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ದಿನನಿತ್ಯದ ಕಚೇರಿ ಬಳಕೆಯ ಉದ್ದೇಶಗಳಿಗಾಗಿ ಯಾವುದೇ ಚೀನೀ ಉತ್ಪನ್ನಗಳನ್ನು ಖರೀದಿಸದಂತೆ ನಿರ್ದೇಶನ ನೀಡಿದರು.

Boycott China: ಚೀನಾ ಕಂಪನಿಯ ಟೆಂಡರ್ ರದ್ದುಗೊಳಿಸಿದ ಡಿಎಫ್‌ಸಿಸಿಐಎಲ್Boycott China: ಚೀನಾ ಕಂಪನಿಯ ಟೆಂಡರ್ ರದ್ದುಗೊಳಿಸಿದ ಡಿಎಫ್‌ಸಿಸಿಐಎಲ್

"ಚೀನಾ ವರ್ತಿಸುವ ರೀತಿಯಿಂದಾಗಿ, ನಾವು ಎಲ್ಲಾ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ನಾನು ಎಲ್ಲರಿಗೂ ಮನವಿ ಮಾಡಲು ಬಯಸುತ್ತೇನೆ" ಎಂದು ಪಾಸ್ವಾನ್ ವರದಿಯಲ್ಲಿ ತಿಳಿಸಿದ್ದಾರೆ.

Ram Vilas Paswan Urges People To Boycott Chinese Products

''ಚೀನಾದ ಉಪ-ಗುಣಮಟ್ಟದ ಉತ್ಪನ್ನಗಳಾದ ಡಯಾಸ್ ಮತ್ತು ಪೀಠೋಪಕರಣಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ರೂಪಿಸಿದ ಗುಣಮಟ್ಟದ ನಿಯಮಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ '' ಎಂದು ಹೇಳಿದರು.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಬಿಐಎಸ್ ಈವರೆಗೆ ವಿವಿಧ ಉತ್ಪನ್ನಗಳಿಗೆ 25 ಸಾವಿರ ಗುಣಮಟ್ಟದ ನಿಯಮಗಳನ್ನು ರೂಪಿಸಿದೆ ಎಂದು ಅವರು ಹೇಳಿದರು. "ನಮ್ಮ ಸರಕುಗಳು ವಿದೇಶಕ್ಕೆ ತಲುಪಿದಾಗ, ಅವುಗಳನ್ನು ಪರಿಶೀಲಿಸಲಾಗುತ್ತದೆ. ನಮ್ಮ ಬಾಸ್ಮತಿ ಅಕ್ಕಿ ರಫ್ತು ತಿರಸ್ಕರಿಸಲ್ಪಡುತ್ತದೆ, ಆದರೆ ಅವರ ಸರಕುಗಳು ಭಾರತಕ್ಕೆ ಬಂದಾಗ ಯಾವುದೇ ಗುಣಮಟ್ಟದ ನಿಯಂತ್ರಣವಿಲ್ಲ" ಎಂದು ಅವರು ಹೇಳಿದರು.

2016ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಹೊಸ ಬಿಐಎಸ್ ಕಾನೂನು, ಭಾರತೀಯ ಮಾನದಂಡಗಳಿಗೆ ಕಡ್ಡಾಯ ಅಥವಾ ಸ್ವಯಂಪ್ರೇರಿತ ಅನುಸರಣೆಯ ಮೂಲಕ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟದ ಸಂಸ್ಕೃತಿಯನ್ನು ಉತ್ತೇಜಿಸಲು ಕೇಂದ್ರ ಮತ್ತು ಬಿಐಎಸ್‌ಗೆ ಅಧಿಕಾರ ನೀಡುತ್ತದೆ.

English summary
Appealing people to boycott Chinese goods amid heightened border tensions in Ladakh, said Union minister Ram Vilas Paswan on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X