ರೈಲ್ವೆ ಇಲಾಖೆಯಿಂದ ಹೊಸ ಸೇವೆ: 20 ನಿಮಿಷ ಮೊದಲು SMS ಅಲರ್ಟ್

ನವದೆಹಲಿ, ಜುಲೈ 26: ರೈಲನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಇರುವ ಪ್ರಮುಖ ಸಮಸ್ಯೆ ಅಂದ್ರೆ ತಲುಪುವ ಸ್ಥಳ ಬಂದರೂ ನಿದ್ದೆಯಿಂದಾಗಿ ಒಮ್ಮೊಮ್ಮೆ ಗೊತ್ತಾಗದಿರುವುದು. ಅದಕ್ಕೆಂದೇ ಎಷ್ಟೋ ಜನ ಮುಂದಿನ ನಿಲ್ದಾಣಕ್ಕೆ ಹೋಗಿ ಇಳಿದಿದ್ದೂ ಇದೆ.

ಇಂಥ ಪೇಚಿಗೆ ಸಿಲುಕುವ ಸನ್ನಿವೇಶ ಬೇಡ ಎಂದು ತಲುಪಬೇಕಾದ ಸ್ಥಳಕ್ಕೆ ಎಷ್ಟು ಗಂಟೆಗೆ ತಲುಪಬಹುದು ಎಂಬ ಅಂದಾಜಿನ ಮೇಲೆ ಅಲಾರ್ಮ್ ಇಟ್ಟುಕೊಳ್ಳುವವರಿದ್ದಾರೆ. ಇಂಥ ಕಷ್ಟವೇ ಬೇಡ ಅಂತ ಭಾರತೀಯ ರೈಲ್ವೆ ಇಲಾಖೆ ಹೊಸ ಸೌಲಭ್ಯವೊಂದನ್ನು ಒದಗಿಸಲಿದೆ.

ರೈಲಿನಲ್ಲಿ ಪ್ರಯಾಣ ಮಾಡುವ ಯಾವುದೇ ವ್ಯಕ್ತಿಗೆ ಆತ ತಲುಪಬೇಕಾದ ಸ್ಥಳ ಬರುವ 20 ನಿಮಿಷ ಮೊದಲು ರೈಲ್ವೇ ವಿಭಾಗದ ಕಡೆಯಿಂದ ಎಸ್ ಎಂಎಸ್ ಅಲರ್ಟ್ ಪಡೆಯುತ್ತಾನೆ! ಇನ್ನು 20 ನಿಮಿಷದ ನಂತರ ತಾನು ಇಳಿಯಬೇಕಾದ ಸ್ಥಳ ಬರುತ್ತದೆ ಎಂಬುದಕ್ಕೆ ಇದು ಮುನ್ಸೂಚನೆ!

Railway passengers to get SMS alert 20 minitues before destination arrives

ಪ್ರಯಾಣಿಕರು ತಾವು ಟಿಕೆಟ್ ಬುಕ್ ಮಾಡುವಾಗ ನೀಡಿದ ಮೊಬೈಲ್ ನಂಬರ್ ಗೆ ಈ ಎಸ್ ಎಂ ಎಸ್ ಅಲರ್ಟ್ ಹೋಗುತ್ತದೆ. ರೈಲು ಬರುವ ಸಮಯ, ಹೊರಡುವ ಸಮಯ, ಈಗ ಎಲ್ಲಿದೆ ಇತ್ಯಾದಿ ಮಾಹಿತಿಗಳನ್ನು ನೀಡುವ ರೈಲ್ವೇ app ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ರೈಲ್ವೇ ಇಲಾಖೆ ತನ್ನಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದು, ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಅಳವಡಿಸುತ್ತಿರುವುದು ಶ್ಲಾಘನೀಯವೆನ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+