ರಫೇಲ್ ಡೀಲ್: ಜೇಟ್ಲಿಗೆ deadline ನೆನಪಿಸಿದ ರಾಹುಲ್ ಗಾಂಧಿ!

ನವದೆಹಲಿ, ಆಗಸ್ಟ್ 30: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ದಿನೇ ದಿನೇ ಒಂದಿಲ್ಲೊಂದು ಟ್ವೀಟ್ ಮಾಡುತ್ತಿರುವ ರಾಹುಲ್ ಗಾಂಧಿ, ಇಂದು ಸಹ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಕಾಲೆಳೆದಿದ್ದಾರೆ.

"ಪ್ರೀತಿಯ ಜೇಟ್ಲಿ ಅವರೇ, ರಫೇಲ್ ಡೀಲ್ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಲು ನೀವು ನೀಡಿದ ಡೆಡ್ ಲೈನ್ ಗೆ ಇನ್ನು 6 ಗಂಟೆ ಮಾತ್ರ ಸಮಯವಿದೆ. ಯುವ ಭಾರತ ಕಾಯುತ್ತಿದೆ. ಆದರೆ ನನಗೆ ಗೊತ್ತು ನೀವು ಈ ಕುರಿತು ಮೋದಿಜೀ ಮತ್ತು ಅನಿಲ್ ಅಂಬಾನಿಜೀ ಅವರನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದೀರಿ. ನಿಮ್ಮ ಮಾತನ್ನು ಏಕೆ ಅವರು ಕೇಳಬೇಕು ಮತ್ತು ನಿಮ್ಮ ಬೇಡಿಕೆಗೆ ಏಕೆ ಒಪ್ಪಿಗೆ ನೀಡಬೇಕು ಎಂಬುದನ್ನು ಅರ್ಥಮಾಡಿಸುತ್ತಿದ್ದೀರಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಫ್ರಾನ್ಸ್ ನೊಂದಿಗೆ ಭಾರತ ಮಾಡಿಕೊಂಡಿರುವ ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿರುವ ಕಾಂಗ್ರೆಸ್ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದೆ. ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

Rahul reminds deadline to form JPC to FM Arun Jaitley

ನಿನ್ನೆಯಷ್ಟೇ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ಅವರಿಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 'ಜೇಟ್ಲಿಯವರೇ, ರಫೇಲ್ ದರೋಡೆ ಬಗ್ಗೆ ದೇಶದ ಗಮನವನ್ನು ಮತ್ತೊಮ್ಮೆ ಸೆಳೆಯುತ್ತಿರುವುದ್ದೀರಿ. ಈ ಕುರಿತು ತನಿಖೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ ರಚಿಸಿದರೆ ಹೇಗೆ? ಸಮಸ್ಯೆ ಎಂದರೆ ನಿಮ್ಮ ಮಹಾನ್ ನಾಯಕರು ತಮ್ಮ ಗೆಳೆಯನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. 24 ಗಂಟೆ ಒಳಗೆ ಉತ್ತರಿಸಿ, ನಾವು ಕಾಯುತ್ತಿರುತ್ತೇವೆ' ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+