ನಿಮ್ಮ ಮುತ್ತಾತ ಮಾಡಿದ ತಪ್ಪು ಅದು: ರಾಹುಲ್ ಗೆ ಬಿಜೆಪಿ ತಪರಾಕಿ

ನವದೆಹಲಿ, ಮಾರ್ಚ್ 14: "ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಲ್ಲಿ ಚೀನಾ ಅಡ್ಡಗಾಲು ಹಾಕಿರುವುದನ್ನು ಸಂಭ್ರಮಿಸುತ್ತಿರುವ ರಾಹುಲ್ ಗಾಂಧಿ ಅವರ ನಡೆ ಪಾಕಿಸ್ತಾನದ ಪತ್ರಿಕೆಗಳಲ್ಲಿ ಹೆಡ್ ಲೈನ್ ಆಗುವುದಕ್ಕೆ ಯೋಗ್ಯ" ಎಂದು ಬಿಜೆಪಿ ಟೀಕಿಸಿದೆ.

ಚೀನಾದ ನಡೆಯಿದ ಇಡೀ ದೇಶವೂ ಬೇಸರದಲ್ಲಿದೆ. ಆದರೆ ರಾಹುಲ್ ಗಾಂಧಿ ಮಾತ್ರ, ಚೀನಾ ಅಧ್ಯಕ್ಷ ಕ್ಸಿಯನ್ನು ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಎಂದೆಲ್ಲ ಟ್ವೀಟ್ ಮಾಡಿ ತಮ್ಮ ಅಪ್ರಬುದ್ಧತೆ ಮೆರೆದಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

"ನಿಮ್ಮ ಮುತ್ತಾತ(ಜವಾಹರ್ ಲಾಲ್ ನೆಹರೂ) ಭಾರತದ ಹಿತಾಸಕ್ತಿಯನ್ನು ಬಲಿಕೊಟ್ಟು ಚೀನಾಕ್ಕೆ ಉಡುಗೊರೆ ನೀಡದಿದ್ದರೆ ಇಂದು ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗುತ್ತಿರಲಿಲ್ಲ.

Rahul Gandhis statement must be headline in Pak says BJP

ನಿಮ್ಮ ಕುಟುಂಬ ಮಾಡಿದ ಎಲ್ಲಾ ತಪ್ಪುಗಳನ್ನು ಭಾರತ ಸರಿಪಡಿಸುತ್ತಿದೆ, ಮತ್ತು ಬಾರತ ಉಗ್ರರ ವಿರುದ್ಧದ ಹೋರಾಟದದಲ್ಲಿ ಗೆದ್ದೇ ಗೆಲ್ಲುತ್ತದೆ. ಅದನ್ನು ಮೋದಿ ಅವರಿಗೆ ಬೀಡಿ, ನೀವು ಗುಟ್ತಾಗಿ ಚೀನಾ ರಾಯಭಾರಿಗಳನ್ನು ಭೇಟಿ ಮಾಡುವುದರಲ್ಲೇ ಕಾಲ ಕಳೆಯಿರಿ" ಎಂದು ಬಿಜೆಪಿ ಟ್ವೀಟ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+