ಜನರು ಇನ್ನೆಷ್ಟು ದಿನ ನಿರುದ್ಯೋಗಿಗಳಾಗಿರಬೇಕು: ಕೇಂದ್ರಕ್ಕೆ ರಾಹುಲ್ ಪ್ರಶ್ನೆ

ನವದೆಹಲಿ, ಸೆಪ್ಟೆಂಬರ್ 17: ದೇಶದ ಜನರು ಉದ್ಯೋಗವಿಲ್ಲದೆ ಇನ್ನೆಷ್ಟು ದಿನ ಇರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮೊದಲು ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ರಾಹುಲ್ ಬಳಿಕ ತರಾಟೆಗೆ ತೆಗೆದುಕೊಂಡಿದ್ದಾರೆ. ನಿರುದ್ಯೋಗ ಪ್ರಮಾಣ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಉದ್ಯೋಗ ಘನತೆಯಾಗಿದ್ದು, ಸರ್ಕಾರ ಜನರಿಗೆ ಇನ್ನು ಎಷ್ಟು ದಿನಗಳವರೆಗೆ ಉದ್ಯೋಗವನ್ನು ನಿರಾಕರಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ರಾಹುಲ್ ಗಾಂಧಿ ಟೀಕಿಸಿದ್ದು, ಯುವ ಜನಾಂಗಕ್ಕೆ ಉದ್ಯೋಗ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Rahul Gandhi Says Youth Will Observe National Unemployment Day Today Amid Job Crisis

ಆದರೆ, ಕೇವಲ 1.77 ಲಕ್ಷ ಉದ್ಯೋಗ ಇರುವುದಾಗಿ ಮಾಧ್ಯಮವೊಂದರ ವರದಿಯನ್ನು ಟ್ವಿಟ್ಟರ್‌ ನಲ್ಲಿ ಟ್ಯಾಗ್ ಮಾಡುವ ಮೂಲಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.

ಉದ್ಯೋಗ ಕೋರಿ ಸುಮಾರು 1 ಕೋಟಿ ಜನರು ಸರ್ಕಾರದ ಪೋರ್ಟಲ್ ವೊಂದರಲ್ಲಿ ನೋಂದಾಯಿಸಿಕೊಂಡಿದ್ದಾರೆ.

Recommended Video

      BSY ಪುತ್ರನಿಗೆ ರಾಜ್ಯ ರಾಜಕೀಯದಲ್ಲಿ ಏನು ಕೆಲಸ | Vijayendra | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+