Get Updates
Get notified of breaking news, exclusive insights, and must-see stories!

ರಾಹುಲ್ ಗಾಂಧಿಯದು 'ಫ್ಯಾನ್ಸಿ ಡ್ರೆಸ್ ಹಿಂದುತ್ವ': ಬಿಜೆಪಿ ಲೇವಡಿ

ನವದೆಹಲಿ, ನವೆಂಬರ್ 15: ಆರ್‌ಎಸ್‌ಎಸ್ ಮತ್ತು ಹಿಂದೂಗಳ ವಿರುದ್ಧ ಕಾಂಗ್ರೆಸ್ ದ್ವೇಷ ಬಿತ್ತುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ರಾಹುಲ್ ಗಾಂಧಿ ಅವರ ದೇವಸ್ಥಾನ ಭೇಟಿ ಕಾರ್ಯಕ್ರಮಗಳನ್ನು 'ಫ್ಯಾನ್ಸಿ ಡ್ರೆಸ್ ಹಿಂದುತ್ವ' ಎಂದು ಟೀಕಿಸಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಆರ್‌ಎಸ್ಎಸ್ ಪ್ರಚಾರದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮತ್ತು ನ.28ರಂದು ವಿಧಾನಸಭೆ ಚುನಾವಣೆ ಬಳಿಕ ಅವರನ್ನು ಕಾಂಗ್ರೆಸ್ ನೋಡಿಕೊಳ್ಳಲಿದೆ ಎಂದು ಮುಸ್ಲಿಮರ ಗುಂಪಿಗೆ ಹೇಳುತ್ತಿರುವಂತಹ ವಿಡಿಯೋ ಬಿಡುಗಡೆಯಾಗಿದ್ದು, ಈ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಈ ವಿಡಿಯೋ ಕಾಂಗ್ರೆಸ್‌ನ ನಿಜವಾದ ಮತ್ತು ವಿಭಜನೆಯ ಮುಖವನ್ನು ಬಹಿರಂಗಪಡಿಸಿದೆ. ಓಲೈಕೆ ಮೂಲಕ ಅದು ಹೇಗೆ ಭಾರತದ ಸಮನ್ವಯ ಸಂಸ್ಕೃತಿಯನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂಬುದು ಗೊತ್ತಾಗುತ್ತಿದೆ.

Rahul gandhis temple visit fancy dress hindutva bjp criticise

ಆರೆಸ್ಸೆಸ್ ವಿರುದ್ಧ ಮತ್ತು ನಿರ್ದಿಷ್ಟವಾಗಿ ಹಿಂದೂ ಸಮುದಾಯದ ವಿರುದ್ಧ ಹೇಗೆ ಅದು ದ್ವೇಷ ಹೊಂದಿಗೆ ಎಂಬುದು ಕೂಡ ಈ ವಿಡಿಯೋದಿಂದ ಗೊತ್ತಾಗುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

'ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುವುದು, ಅವರು ಧರಿಸುವ ತಾತ್ಕಾಲಿಕ ಜನಿವಾರ, ಅವರು ತೆಗೆದುಕೊಂಡಿರುವ ಹಿಂದುತ್ವದ ಫ್ಯಾನ್ಸಿ ಡ್ರೆಸ್ ಎಲ್ಲವೂ ಕಣ್ಣೀರು ಒರೆಸುವ ತಂತ್ರವಲ್ಲದೆ ಮತ್ತೇನೂ ಅಲ್ಲ ಎಂದು ಕಿಡಿ ಕಾರಿದ್ದಾರೆ.

ಕಮಲ್ ನಾಥ್ ಅವರದು ಇದೊಂದೇ ವಿಡಿಯೋ ಅಥವಾ ಹೇಳಿಕೆ ಮಾತ್ರವಲ್ಲ. ಅದು ಮಧ್ಯಪ್ರದೇಶ ಚುನಾವಣೆಯ ಕಾಂಗ್ರೆಸ್‌ ಮಾಡಿರುವ ಪ್ರಣಾಳಿಕೆಯಲ್ಲಿಯೇ ತಾನು ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ಶಾಖೆಗಳನ್ನು ನಿಷೇಧಿಸುವುದಾಗಿ ಹೇಳಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಮತ್ತು ಕಮಲ್ ನಾಥ್ ಆರೆಸ್ಸೆಸ್ ಹಾಗೂ ನಿರ್ದಿಷ್ಟವಾಗಿ ಹಿಂದೂ ಸಮುದಾಯದೆಡೆಗೆ ಹೊಂದಿರುವ ಧೋರಣೆಯಾಗಿದೆ. ಇದೇ ಜನರು ಶಶಿ ತರೂರ್ ಮತ್ತು ಅವರಂತಹ ಇತರರ ಮೂಲಕ ಹಿಂದೂಗಳ ವಿರುದ್ಧ ಮತ್ತೆ ಮತ್ತೆ ನಿಂದನೆ ಮಾಡಿಸುತ್ತಾರೆ ಎಂದು ಆರೋಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+