ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಮುನ್ನ ರೈಲ್ವೆ ಕೂಲಿಗಳ ಭೇಟಿ ಮಾಡಿದ ರಾಹುಲ್

By Srinath
|
Google Oneindia Kannada News

ನವದೆಹಲಿ, ಫೆ.12- ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಬಜೆಟ್ ಮಂಡಿಸುವುದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಯುವರಾಜ ಅವರು ನಿನ್ನೆ ಸೋಮವಾರ ನವದೆಹಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ, ಅಲ್ಲಿರುವ ಪೋರ್ಟರುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುವ ಪೋರ್ಟರುಗಳನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ ಅವರ ಸಮಸ್ಯೆಗಳು ಏನೇ ಇದ್ದರೂ ಅದನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಆದರೆ ಇಂದು ಬಜೆಟ್ ನಲ್ಲಿ ಅಂತಹ ಯಾವುದೇ ಯೋಜನೆ ಪ್ರಸಾಪವಾಗಿಲ್ಲ.

ಪೋರ್ಟರುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇನೆ

ಪೋರ್ಟರುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇನೆ

'ನಾನು ನಿಮ್ಮ ಜತೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇನೆ. ನಾನು ನಿಮ್ಮ ಸಮಸ್ಯೆಗಳನ್ನು ಆಳವಾಗಿ ಚರ್ಚಿಸಲು ಇಚ್ಛಿಸುತ್ತೇನೆ' ಎಂದು portersಗೆ ( ರೈಲ್ವೆ ಕೂಲಿಗಳು) ಹೇಳಿದರು.

ನಿಮ್ಮ ಸಮಸ್ಯೆಗಳನ್ನು ರೈಲ್ವೆ ಸಚಿವರ ಬಳಿಗೆ port ಮಾಡುತ್ತೇನೆ

ನಿಮ್ಮ ಸಮಸ್ಯೆಗಳನ್ನು ರೈಲ್ವೆ ಸಚಿವರ ಬಳಿಗೆ port ಮಾಡುತ್ತೇನೆ

'ನಾನು ನಿಮಗೆ ಒಂದು ಭರವಸೆಯನ್ನು ನೀಡಲು ಇಚ್ಛಿಸುತ್ತೇನೆ. ಏನು ಮಾಡಲು ಸಾಧ್ಯವೋ ಅದನ್ನೆಲ್ಲಾ ನಿಮಗಾಗಿ ಹೃದಯಾಂತರಾಳದಿಂದ ಮಾಡಲು ಬಯಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ರೈಲ್ವೆ ಸಚಿವರ ಬಳಿಗೆ port ಮಾಡುತ್ತೇನೆ. ನಿಮ್ಮ ಸಮಸ್ಯೆಗಳನ್ನು ನೀಗಿಸುವಂತೆ ಸಚಿವರಿಗೆ ಸೂಚಿಸುತ್ತೇನೆ' ಎಂದು ರಾಹುಲ್ ಗಾಂಧಿ porters ಗೆ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪೋರ್ಟರುಗಳ ಸಮಸ್ಯೆ

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪೋರ್ಟರುಗಳ ಸಮಸ್ಯೆ

'ನಿಮ್ಮಂತಹ 70 ಕೋಟಿ ಜನ ದೇಶದಲ್ಲಿದ್ದಾರೆ. ಅವರ ಬದುಕುಗಳನ್ನು ಉತ್ತಮಗೊಳಿಸಿ, ಬದಲಾಯಿಸಲು ಪ್ರಯತ್ನಿಸುತ್ತೇನೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನಿಮ್ಮ ಅನಿಸಿಕೆ/ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವೆ' ಎಂದು ರಾಗಾ ಹೇಳಿದ್ದಾರೆ.

 porter ನಾಯಕರನ್ನು ಭೇಟಿ ಮಾಡಿದ ರಾಹುಲ್

porter ನಾಯಕರನ್ನು ಭೇಟಿ ಮಾಡಿದ ರಾಹುಲ್

ರಾಹುಲ್ ಗಾಂಧಿ ಎದುರು ರೈಲ್ವೆ porterಗಳು ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ. porterಗಳನ್ನು ಭೇಟಿ ಮಾಡುವ ಮುನ್ನ ರಾಹುಲ್ ಗಾಂಧಿ ಅವರು porterಗಳ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು.

English summary
Congress vice-president Rahul Gandhi reaches out to porters at porters yesterday at New Delhi Railway Station before Union Railway Budget today(Feb 12). Porters shared their problems with the Congress leader. Earlier in the day, Rahul Gandhi had met representatives of the porters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X