ಕಾಂಗ್ರೆಸ್ ವರ್ಕಿಂಗ್ ಕಮಿಟಿ ರಚಿಸಿ ಲೇವಡಿಗೆ ಗುರಿಯಾದ ರಾಹುಲ್!

ನವದೆಹಲಿ, ಜುಲೈ 18: ಮಹಿಳಾ ಮೀಸಲಾತಿ ವಿಧೇಕಯ ಲೋಕಸಭೆಯಲ್ಲಿ ಮಂಡನೆಯಾಗಲೇಬೇಕೆಂದು ಹೋರಾಟ ನಡೆಸಿರುವ, ನರೇಂದ್ರ ಮೋದಿಗೆ ಈ ಕುರಿತು ಸುದೀರ್ಘ ಪತ್ರ ಬರೆದಿರುವ, ಮಹಿಳಾ ಸಬಲೀಕರಣದ ಪರ ಭಾಷಣ ಬಿಗಿಯುವ ರಾಹುಲ್ ಗಾಂಧಿಯವರು ತಮ್ಮ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಕೊಟ್ಟ ಸ್ಥಾನವೆಷ್ಟು?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಚಿಸಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಕೇವಲ 15% ಪ್ರತಿಶತ ಮಹಿಳೆಯರಷ್ಟೇ ಸ್ಥಾನ ಪಡೆದಿದ್ದು, ಈ ಕಾರಣಕ್ಕೆ ರಾಹುಲ್ ಗಾಂಧಿ ಲೇವಡಿಗೆ ಒಳಗಾಗಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಬೇಕು ಎಂದು ಇತ್ತೀಚೆಗಷ್ಟೇ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ ಇದೀಗ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿಯೇ ಮಹಿಳೆಯರಿಗೆ ಸಾಕಷ್ಟು ಸ್ಥಾನ ನೀಡಲಾಗಿಲ್ಲ.

ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಕುರಿತಂತೆ ಇರುವ 'ಮಹಿಳಾ ಮೀಸಲಾತಿ ವಿಧೇಯಕ'ವನ್ನು ಮಂಡಿಸುವಂತೆ ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಆದರೆ ನಿನ್ನೆ ರಚನೆಯಾದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿರುವ 51 ಜನ ಸದಸ್ಯರಲ್ಲಿ ಕೇವಲ 7 ಮಹಿಳೆಯರು ಸ್ಥಾನ ಪಡೆದಿದ್ದಾರೆ!

Rahul Gandhi gives only 15 % quota to women in CWC

ಅಂಬಿಕಾ ಸೋನಿ, ಕುಮಾರಿ ಸೆಲ್ಜಾ, ಶೀಲಾ ದೀಕ್ಷಿತ್, ರಜನಿ ಪಾಟೀಲ್, ಆಶಾ ಕುಮಾರಿ ಸೇರಿದಂತೆ ಕೇವಲ ಏಳು ಮಹಿಳೆಯರು ಈ ಸಮಿತಿಯಲ್ಲಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಸಮಿತಿಯಲ್ಲಿ ಸ್ಥಾನ ಪಡೆದು ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಇಟ್ಟಿರುವುದು ವಿಶೇಷ.

ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ(ಜು.18) ಆರಂಭವಾಗಿದ್ದು ಆಗಸ್ಟ್ 10ರವರೆಗೆ ನಡೆಯಲಿದೆ. ಈ ಸಮಯದಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಚರ್ಚೆಗೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+