ಮೋದಿ ಅನಿಲ್ ಅಂಬಾನಿಯ ಮಿಡ್ಲ್ ಮ್ಯಾನ್! ರಾಹುಲ್ ರಫೇಲ್ ದಾಳಿ!

Recommended Video

      ನರೇಂದ್ರ ಮೋದಿ ಹಾಗು ರಾಹುಲ್ ಗಾಂಧಿ ನಡುವೆ ಶುರುವಾಯ್ತು ರಫೇಲ್ ಡೀಲ್ ಜಟಾಪಟಿ | Oneindia Kannada

      ನವದೆಹಲಿ, ಫೆಬ್ರವರಿ 12 : ರಫೇಲ್ ವಿವಾದ ಅಷ್ಟು ಸುಲಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಟ್ಟು ಬಿಡುವಂತೆ ಕಾಣುತ್ತಿಲ್ಲ. ಮಂಗಳವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಮೇಲೆ ಮತ್ತೊಮ್ಮೆ ರಫೇಲ್ ದಾಳಿ ನಡೆಸಿದರು.

      ಭಾರತ ಸರ್ಕಾರ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಮಾಡುವುದಾಗಿ ಪ್ರಕಟಿಸಿದ ಎರಡು ವಾರ ಮುಂಚೆಯಷ್ಟೇ ಉದ್ಯಮಿ ಅನಿಲ್ ಅಂಬಾನಿ ಅವರು ಫ್ರಾನ್ಸ್ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.

      ರಫೇಲ್ ಒಪ್ಪಂದವಾಗುವ ಹತ್ತು ದಿನ ಮೊದಲು ಅನಿಲ್ ಅಂಬಾನಿ ಅವರು ಫ್ರಾನ್ಸ್ ನ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಈ ಡೀಲ್ ಅನ್ನು ನಾವೇ ಪಡೆಯುತ್ತೇವೆ ಎಂದಿದ್ದರು ಎಂದು ಏರ್ ಬಸ್ ಎಕ್ಸಿಕ್ಯೂಟಿವ್ ಒಬ್ಬರು ಹೇಳಿದ್ದು, ಭಾರೀ ವಿವಾದ ಸೃಷ್ಟಿಸಿದೆ.

      ರಾಷ್ಟ್ರದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ರಫೇಲ್ ಡೀಲ್ ಗೆ ಸಂಬಂಧಿಸಿದ ಕರಡು ಮಾಹಿತಿ ಬೇರೆಲ್ಲರಿಗಿಂತ ಮೊದಲು ಒಬ್ಬ ಉದ್ಯಮಿಗೆ ತಿಳಿದಿತ್ತು ಎಂದರೆ ಅಚ್ಚರಿಯಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

      ರಿಲಯನ್ಸ್ ಇಂಡಸ್ಟ್ರೀಸ್ ನ ಅನಿಲ್ ಅಂಬಾನಿ ಅವರಿಗೆ ಮಿಡ್ಲ್ ಮ್ಯಾನ್ ಆಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

      ಪ್ರಧಾನಿಯವರೇ ಉತ್ತರ ನೀಡಿ...

      ಪ್ರಧಾನಿಯವರೇ ಉತ್ತರ ನೀಡಿ...

      ಈಗ ಪ್ರಧಾನಿ ಮೋದಿ ಅವರೇ ಉತ್ತ ನೀಡಲಿ. ರಫೇಲ್ ಡೀಲ್ ಆಗುವ ಹತ್ತು ದಿನ ಮೊದಲೇ ಈ ವಿಷಯ ಅನಿಲ್ ಅಂಬಾನಿಯವರಿಗೆ ಹೇಗೆ ಗೊತ್ತಿತ್ತು? ರಕ್ಷಣಾ ಸಚಿವ, ಎಚ್ ಎಎಲ್ ಕಾರ್ಯದರ್ಶಿಗೆ ತಿಳಿಯದೆ ಇದ್ದಿದ್ದು ಒಬ್ಬ ಉದ್ಯಮಿಗೆ ಹೇಗೆ ತಿಳಿಯಿತು? ಅಕಸ್ಮಾತ್ ಇದು ಸತ್ಯವೇ ಆದರೆ ಪ್ರಧಾನಿಯು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗೌಪ್ಯತೆಯ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ. ಅದಕ್ಕಾಗಿ ಕ್ರಮ ಕೈಗೊಳ್ಳಬೇಕು - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

      ರಾಷ್ಟ್ರದ ಭದ್ರತೆ ಜೊತೆ ರಾಜಿ

      ರಾಷ್ಟ್ರದ ಭದ್ರತೆ ಜೊತೆ ರಾಜಿ

      ರಾಷ್ಟ್ರದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಭಾರತ ಸರ್ಕಾರ ಫ್ರಾನ್ಸ್ ನೊಂದಿಗೆ ಮಾಡಿಕೊಳ್ಳಲಿರುವ ಈ ರಕ್ಷಣಾ ಒಪ್ಪಂದ ಬೇರೆಲ್ಲರಿಗಿಂತ ಮೊದಲು ಉದ್ಯಮಿಯೊಬ್ಬರಿಗೆ ತಿಳಿದಿತ್ತು ಎಂದರೆ ಅದರ ಅರ್ಥವೇನು? ಗೂಢಾಚಾರಿಗಳು ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

      ಕಳ್ಳತನಕ್ಕೆ ನೆರವು ನೀಡಿದ ಮೋದಿ!

      ಕಳ್ಳತನಕ್ಕೆ ನೆರವು ನೀಡಿದ ಮೋದಿ!

      ಭಾರತದ ಪ್ರೀತಿಯ ವಿದ್ಯಾರ್ಥಿ ಮತ್ತು ಯುವಕರೇ, ಪ್ರತಿ ದಿನವೂ ರಫೇಲ್ ಡಿಲ್ ಗೆ ಸಂಬಂಧಿಸಿದಂತೆ ಹೊಸ ಹೊಸ ಹೊಳಹುಗಳು ಹೊರಬರುತ್ತಿರುವುದನ್ನು ನೋದಿದರೆ ಅರ್ಥವಾಗುತ್ತದೆ, ಪ್ರಧಾನಿ ತಮ್ಮ ಸ್ನೇಹಿತ ಅನಿಲ್ ಅಂಬಾನಿಯರಿಗೆ 30000 ಕೋಟಿ ರೂ.ಗಳನ್ನು ಕದಿಯಲು ನೆರವು ನೀಡಿದ್ದಾರೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

      ಸಿಎಜಿ ಅಂದ್ರೆ ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್

      ಸಿಎಜಿ ಅಂದ್ರೆ ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್

      ಸಿಎಜಿ ವರದಿಯಲ್ಲಿ ಹುರುಳಿಲ್ಲ. ಸಿಎಜಿ ಎಂದರೆ ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್ ಎಂದು! ಅದು ನರೇಂದ್ರ ಮೋದಿ ಅವರ ವರದಿ. ಚೌಕಿದಾರನಿಂದ, ಚೌಕಿದಾರನಿಗಾಗಿ, ಚೌಕಿದಾರನೇ ಸಿದ್ಧಪಡಿಸಿದ ವರದಿ ಅದು - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+