ಪುಲ್ವಾಮಾ ಹತ್ಯಾಕಾಂಡ : ಪಾಕ್ ಭಯೋತ್ಪಾದನೆ ವಿರುದ್ಧ ವಿಶ್ವದ ಒಗ್ಗಟ್ಟು

ಬೆಂಗಳೂರು, ಫೆಬ್ರವರಿ 15 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧಕ ಭೀಕರ ಹತ್ಯಾಕಾಂಡ ನಡೆದ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯ ವಿರುದ್ಧ 'ಯುದ್ಧ'ಕ್ಕೆ ಭಾರತ ಮುಂದಾಗಿದೆ.

ಈಗಾಗಲೆ ಈ ಉಗ್ರರ ದಾಳಿಯನ್ನು ಖಂಡಿಸಿ, ಭಾರತಕ್ಕೆ ಬೆಂಬಲವಾಗಿ ನಿಂತ ಹಲವಾರು ರಾಷ್ಟ್ರಗಳ ನಾಯಕರನ್ನು ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಸಂಪರ್ಕಿಸಿದ್ದು, ಈ ಹೇಯ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡ ನೇರವಾಗಿ ಇದೆ ಎಂದು ಮನದಟ್ಟು ಮಾಡಲು ಯತ್ನಿಸುತ್ತಿದೆ.

ಕೇವಲ ಒಂದು ಸರ್ಜಿಕಲ್ ಸ್ಟ್ರೈಕ್ ಅಥವಾ ನೇರಾನೇರ ಯುದ್ಧದಿಂದ ಭಯೋತ್ಪಾದನೆಯನ್ನು ಹತ್ತಿಕ್ಕಲು ಮತ್ತು ನಿರಂತರವಾಗಿ ಭಾರತದ ಮೇಲೆ ದಾಳಿ ಮಾಡುತ್ತಿರುವ ಪಾಕಿಸ್ತಾನವನ್ನು ಹಣಿಯಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಭಾರತ, ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ವಿಭಿನ್ನ ಯುದ್ಧವನ್ನು ಸಾರಿದೆ.

Pulwama terror attack : Representatives of various countries arrive to Delhi

ಒಮ್ಮತದ ಅಭಿಪ್ರಾಯ : ಬಲ್ಲ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ನೆಲೆನಿಂತಿರುವ ಮತ್ತು ಪಾಕ್ ಬೆಂಬಲವಿರುವ ಜೈಷ್-ಎ-ಮೊಹಮ್ಮದ್ ಸಂಘಟನೆಯ ನೇರ ಕೈವಾಡವಿದೆ ಮತ್ತು ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನ, ಸಂಘಟನೆಗಳಿಗೆ ಎಲ್ಲ ರೀತಿಯ ಬೆಂಬಲ ಮತ್ತು ಹಣಕಾಸು ನೆರವನ್ನು ನಿಲ್ಲಿಸಬೇಕು ಎಂಬ ನಿಲುವಿಗೆ ಬಂದಿವೆ. ಹಾಗೆಯೆ, ಜೈಷ್-ಎ-ಮೊಹಮ್ಮದ್ ಮತ್ತು ಮಸೂರ್ ಅಜರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ.

ಭಾರತದ ವಿದೇಶಾಂಗ ಸಚಿವಾಲಯ ಕರೆದಿರುವ ಸಭೆಯಲ್ಲಿ ಭಾಗವಹಿಸಲು, ಭಯೋತ್ಪಾದನೆ ನಿಗ್ರಹದ ಸಂಬಂಧ ಭಾರತದ ಜೊತೆ ಮಾತುಕತೆ ನಡೆಸಲು ಜರ್ಮನಿ, ಹಂಗರಿ, ಇಟಲಿ, ಯುರೋಪಿಯನ್ ಯೂನಿಯನ್, ಕೆನಡ, ಬ್ರಿಟನ್, ರಷ್ಯಾ, ಇಸ್ರೇಲ್, ಆಸ್ಟ್ರೇಲಿಯಾ, ಶ್ರೀಲಂಕಾ, ಅಫಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ದಕ್ಷಿಣ ಕೊರಿಯಾ, ಸ್ವೀಡನ್, ಸ್ಲೊವಾಕಿಯಾ, ಫ್ರಾನ್ಸ್, ಸ್ಪೇನ್, ಭೂತಾನ್ ಮತ್ತು ಜಪಾನ್ ಸೇರಿದಂತೆ 25 ರಾಷ್ಟ್ರಗಳ ಪ್ರತಿನಿಧಿಗಳು ದೆಹಲಿಗೆ ಆಗಮಿಸಿದ್ದರು.

ಪಾಕಿಸ್ತಾನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೆರವು ನೀಡುತ್ತ ಬಂದಿರುವ ಚೀನಾ ಕೂಡ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದು, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಹತ್ಯೆಯಾಗಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದೆ. ಯಾವುದೇ ರೀತಿಯ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ಸಂದೇಶ ಸಾರಿದೆ.

ಪುಲ್ವಾಮಾ ದಾಳಿಯನ್ನು ಅಮೆರಿಕದ ಭದ್ರತಾ ತಜ್ಞರು ಕೂಡ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದಲ್ಲಿ ಅಣಬೆಗಳಂತೆ ಹುಟ್ಟಿಕೊಂಡಿರುವ ಉಗ್ರ ಸಂಘಟನೆಗಳನ್ನು ಹತ್ತಿಕ್ಕುವಲ್ಲಿ ಮತ್ತು ದಮನ ಮಾಡುವಲ್ಲಿ ಪಾಕಿಸ್ತಾನದ ಮನವೊಲೀಸರು ಅಮೆರಿಕ ಕೂಡ ಸೋತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಭಯೋತ್ಪಾದಕ ಸಂಘಟನೆಗಳನ್ನು ನಿರ್ನಾಮ ಮಾಡದೆ ಪಾಕಿಸ್ತಾನಕ್ಕೆ ಬೇರೆ ದಾರಿಯೇ ಇಲ್ಲದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+