ಭವಿಷ್ಯದ ಸಂಚಾರ ವ್ಯವಸ್ಥೆಗೆ ಏಳು 'C' ಸೂತ್ರ ಮುಂದಿಟ್ಟ ಮೋದಿ

ನವದೆಹಲಿ, ಸೆಪ್ಟೆಂಬರ್ 07: ಭಾರತದ ನಗರಗಳನ್ನು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಮುಕ್ತ ಮಾಡುವ ಉದ್ದೇಶದಿಂದ ನವದೆಹಲಿಯಲ್ಲಿ ಆಯೋಜಿತವಾಗಿರುವ ಜಾಗತಿಕ ಮೊಬಿಲಿಟಿ ಶೃಂಗಸಭೆಯನ್ನು (MOVE) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು.

ಎರಡು ದಿನದ ಜಾಗತಿಕ ಮಟ್ಟದ ಶೃಂಗಸಭೆಯನ್ನು ನೀತಿ ಆಯೋಗವು ಆಯೋಜಿಸಿದ್ದು. ಜಾಗತಿಕ ಮಟ್ಟದ ಹಲವು ತಜ್ಞರು ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಹಲವು ತಜ್ಞರು ವಾಯು ಮಾಲಿನ್ಯ ನಿಯಂತ್ರಣಕ್ಕೆ ತಮ್ಮ ಯೋಜನೆಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಿದ್ದಾರೆ.

ಉದ್ಘಾಟನೆ ನಂತರ ಮಾತನಾಡಿದ ಪ್ರಧಾನಿ ಮೋದಿ ಅವರು, ಉತ್ತಮ ಸಂಚಾರ ವ್ಯವಸ್ಥೆಗೆ ಏಳು 'C' ಸೂತ್ರ ಮುಂದಿಟ್ಟರು. Common (ಸಾಮಾನ್ಯ ಸಂಚಾರ), Connected (ಸಂಪರ್ಕ), Convenient (ಸುಗಮ), Congestion-free (ದಟ್ಟಣೆ ರಹಿತ), Charged (ಮರುಬಳಕೆ ಮಾಡಬಹುದಾದ), Clean (ಸ್ವಚ್ಛ), Cutting-edge (ಕೊರತೆ ಇಲ್ಲದ) ಸಂಚಾರ ವ್ಯವಸ್ಥೆ ಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Prime Minister Narendra Modi inaugurated 1st Global Mobility Summit

ಉತ್ತಮ ಸಂಚಾರ ವ್ಯವಸ್ಥೆ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಸಂಚಾರ ವ್ಯವಸ್ಥೆ ಉತ್ತಮವಾಗಿದ್ದರೆ ಜೀವನ ಶೈಲಿ ಸುಧಾರಣೆಗೆ ಅನುಕೂಲ ಎಂದು ಹೇಳಿದ ಅವರು ಎಲೆಕ್ಟ್ರಿಕ್ ವಾಹನಗಳು ಮುಂದಿನ ಪೀಳಿಗೆಯ ಸಂಚಾರ ಸಾಧನಗಳಾಗಬೇಕು ಎಂದು ಪ್ರತಿಪಾದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+