ಅಂಚೆ ಇಲಾಖೆ ಖಾತೆದಾರರಿಗೆ ಎಟಿಎಂ, ಸ್ಟೇಟ್‌ಮೆಂಟ್ ಸೌಲಭ್ಯ

ನವದೆಹಲಿ, ಜ. 1: ದೇಶದಲ್ಲಿ ಎಲ್ಲ ಬ್ಯಾಂಕ್‌ಗಳೂ ಎಟಿಎಂ ಮೂಲಕ ಹಣ ಪಡೆಯುವ ವ್ಯವಸ್ಥೆ ಕಲ್ಪಿಸಿವೆ. ಅನೇಕ ಸಹಕಾರಿ ಬ್ಯಾಂಕ್‌ಗಳೂ ತಾವೇನೂ ಕಡಿಮೆ ಇಲ್ಲ ಎಂಬಂತೆ ಎಟಿಎಂ ಕಾರ್ಡ್ ನೀಡಿವೆ. ಆದರೆ, ಇದುವರೆಗೂ ಅಂಚೆ ಇಲಾಖೆ ಮಾತ್ರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರಲಿಲ್ಲ. ಈಗ ಎಟಿಎಂ ಸೌಲಭ್ಯ ನೀಡಲು ಮುಂದಾಗಿದೆ. [ಅಂಚೆಚೀಟಿ ಪ್ರದರ್ಶನ, ಸ್ಪರ್ಧೆ]

atm

ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಹೊಂದಿದವರು ಎಟಿಎಂ ಹಾಗೂ ಸ್ಟೇಟ್‌ಮೆಂಟ್ ಸೌಲಭ್ಯ ಪಡೆಯಲಿದ್ದಾರೆ. ಇಲಾಖೆಯ ಹಣಕಾಸು ಸೇವೆಯನ್ನು ಜನಸ್ನೇಹಿಯನ್ನಾಗಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೆ ಎಟಿಎಂ ಕಾರ್ಡ್ ಹಾಗೂ ಸ್ಟೇಟ್‌ಮೆಂಟ್ ನೀಡುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. [ಅಂಚೆ ಇಲಾಖೆ ಮನೆಗೇ ಬಂದು ಪತ್ರ ಒಯ್ಯುತ್ತೆ]

ಈ ಸಂಬಂಧ ಅಂಚೆ ಕಚೇರಿಗಳಿಗೆ ಸುತ್ತೋಲೆಯನ್ನೂ ಹೊರಡಿಸಲಾಗಿದೆ. ವಿವಿಧ ಹಂತಗಳಲ್ಲಿ ಜಾರಿಗೊಳ್ಳಲಿರುವ ಈ ಸೌಲಭ್ಯವು ಮೊದಲು ಕೆಲವೇ ಕಚೇರಿಗಳಲ್ಲಿ ಆರಂಭವಾಗಲಿದೆ. ನಂತರ ದೇಶಾದ್ಯಂತ ವಿಸ್ತರಿಸುವ ಯೋಚನೆ ಕೇಂದ್ರ ಸರ್ಕಾರದ್ದು. [ದೇವರಿಗೆ ಪತ್ರ ಕಳಿಸಿ]

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಯಾವುದೇ ಅಂಚೆ ಕಚೇರಿಯಲ್ಲಿ ಹಣ ಸ್ವೀಕರಿಸಬಹುದು. ಪ್ರಸ್ತುತ ದೇಶದ 676 ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದ್ದು, ಈ ಕಚೇರಿಗಳಲ್ಲಿ ವ್ಯವಸ್ಥೆಯ ಲಾಭ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+