ರಾಜದೀಪ್ ಸರ್ದೇಸಾಯಿ ಚಾನೆಲ್ ಏನು ಹೇಳುತ್ತದೆ?

ನವದೆಹಲಿ, ಮೇ 13: ನಿನ್ನೆಗೆ ಮಹಾ ಚುನಾವಣೆ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್ ಗಳ ಸುರಿಮಳೆಯಾಗುತ್ತಿದೆ. ಯಾವುದನ್ನು ನಂಬುವುದು ಯಾವುದು ಬಿಡುವುದು ಎಂಬ ಪೀಕಲಾಟ ಮತದಾರನನ್ನು ಕಾಡತೊಡಗಿದೆ.

ಆದರೆ ಈ ಎಕ್ಸಿಟ್ ಪೋಲ್ ಗಳ ಸಾರಾಂಶವೊಂದಂತೂ ಸ್ಪಷ್ಟವಾಗಿದೆ. ಏನಪ್ಪಾ ಅಂದರೆ ಹಾಲಿ ಯುಪಿಎ ಸರಕಾರ Exit ಆಗುವುದು ನಿಶ್ಚಿತ ಎನ್ನುತ್ತಿದೆ. ಹಾಗೆಯೇ 'ಅಬ್ ಕಿ ಬಾರ್ ಮೋದಿ ಸರಕಾರ' ಎಂದು ಘಂಟಾಘೋಷವಾಗಿ ಸಾರುತ್ತಿವೆ. (ಕಾಪ್ಸ್ ಸಮೀಕ್ಷೆ : ರಾಜ್ಯದಲ್ಲಿ ಯಾರಿಗೆ ಗೆಲುವು, ಸೋಲು?)

ಏಳು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಜನಮನ ತಲುಪಿದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ದಾಮೋದರದಾಸ್ ಮೋದಿ ಅವರು ಮೇ 16ರ ಅಧಿಕೃತ ಫಲಿತಾಂಶ ಹೊರಬಿದ್ದು ಅಧಿಕೃತವಾಗಿ ಬಹುಮತ ಗಳಿಸಿ, ಮುಂದಿನ ಪ್ರಧಾನಿಯಾಗಿ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಒಂದು ಮಾತು ಸ್ಪಷ್ಟ. ಇದನ್ನು ಹೇಳುತ್ತಿರುವುದು ಹಾಲಿ ಸಮೀಕ್ಷೆಯಲ್ಲಿ ರಾಜದೀಪ್ ಸರ್ದೇಸಾಯಿ ನೇತೃತ್ವದ CNN-IBN. (Exit Pollಗಳ ಬಂಡವಾಳ ಇಷ್ಟೇ ಕಣ್ಣಣ್ಣೋ!)

ಪಂಚ ರಾಜ್ಯಗಳಲ್ಲಿ ಬಿಜೆಪಿ ಸಾಧನೆ ಹೇಗಿದೆ? ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ (ಒಟ್ಟು 139 ಸ್ಥಾನಗಳು) CNN-IBN-CSDS-Lokniti post-poll survey ಹೀಗಿದೆ:

ಮೊದಲನೆಯದಾಗಿ ಮಹಾರಾಷ್ಟ್ರದಲ್ಲಿ:

ಮೊದಲನೆಯದಾಗಿ ಮಹಾರಾಷ್ಟ್ರದಲ್ಲಿ:

48 ಸ್ಥಾನಗಳಿವೆ. ಅದರಲ್ಲಿ ಬಿಜೆಪಿ-ಶಿವಸೇನಾ- ಆರ್ ಪಿಐ ಮೈತ್ರಿ 33-37 ಸೀಟುಗಳನ್ನು ಹಂಚಿಕೊಳ್ಳಲಿದೆ. ಆಡಳಿತಾರೂಢ ಕಾಂಗ್ರೆಸ್- ಎನ್ ಸಿಪಿ ಮೈತ್ರಿಗೆ ಮುಖಭಂಗವಾಗಲಿದೆ. ಹರಸಾಹಸಪಟ್ಟು ಜಸ್ಟ್ ಎರಡಂಕಿ (11-15) ದಾಟಬಹುದಷ್ಟೆ. ಮಾರ್ಚ್ ಕೊನೆಯ ವಾರದಲ್ಲಿ ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಗಿಂತಲೂ ಈಗಿನ ಫಲಿತಾಂಶ ಭಿನ್ನವಾಗೇನೂ ಇಲ್ಲ. ಇನ್ನು ಮೇಲ್ಛಾವಣಿ ಕಿತ್ತು ಹೋಗುವಂತೆ ಅರಚುತ್ತಿದ್ದ ಆಮ್ ಆದ್ಮಿ ಪಕ್ಷ ಒಂದೂ ಸೀಟು ಗೆಲ್ಲುವುದಿಲ್ಲ. ಜತೆಗೆ ಅದರ ವೋಟ್ ಗಳಿಕೆ ಶೇ. 3ರಷ್ಟು ಅಷ್ಟೇ! ಗಮನಿಸಿ ಮಹಾರಾಷ್ಟ್ರದಲ್ಲಿ ಇದೇ ಅಕ್ಟೋಬರ್ ತಿಂಗಳಲ್ಲಿ ರಾಜ್ಯ ವಿಧಾಸನಭೆಗೆ ಚುನಾವಣೆಗಳು ನಡೆಯಲಿದೆ.

ಮೋದಿ ನಾಡಿನಲ್ಲಿ ಹೇಗೆ:

ಮೋದಿ ನಾಡಿನಲ್ಲಿ ಹೇಗೆ:

ಗುಜರಾತಿನಲ್ಲಿ ಏಕಪಕ್ಷೀಯವಾಗಿ ಬಿಜೆಪಿ ಪರ ಮತದಾರ ಒಲವು ಬೀರಿದ್ದಾನೆ. ಅರ್ಥಾತ್ ತವರನಲ್ಲಿ ಮೋದಿಯದ್ದು ಕ್ಲೀನ್ ಸ್ವೀಪ್. ಕಾಮಗ್ರೆಸ್ಸಿಗೋ ಒಂದೈದು ಸೀಟು ಬಂದರೆ ಹೆಚ್ಹೆಚ್ಚು. ಒಟ್ಟು 26 ಸ್ಥಾನಗಳ ಪೈಕಿ, 2009ರಲ್ಲಿ ಬಿಜೆಪಿಗೆ 15 ಲೋಕಸಭಾ ಕ್ಷೇತ್ರಗಳು ಒಲಿದಿದ್ದವು. ಕಾಂಗ್ರೆಸ್ 11 ಗೆದ್ದಿತ್ತು.

ರಾಣಿ ಊರಿನಲ್ಲಿ ಹೇಗೆ?

ರಾಣಿ ಊರಿನಲ್ಲಿ ಹೇಗೆ?

ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ರಾಜಸ್ಥಾನದಲ್ಲಿ ಕಳೆದ ಡಿಸೆಂಬರಿನಲ್ಲಷ್ಟೇ ಭರ್ಜರಿ ಗೆಲುವಿನ ರುಚಿ ಕಂಡಿದ್ದ ಮಾತೆ ವಸುಂಧರಾ ಈ ಬಾರಿ ಲೋಕಸಭೆಯಲ್ಲಿಯೂ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಡುವ ಲೆಕ್ಕಾಚಾರವಿದೆ. ರಾಜ್ಯದಲ್ಲಿನ 25 ಸ್ಥಾನಗಳ ಪೈಕಿ ಬಿಜೆಪಿಗೆ 22-24 ಸೀಟುಗಳ ಖಾತ್ರಿಯಿದೆ. ಅದೇ ಕಾಂಗ್ರೆಸ್ಸಿಗೆ ಮತ್ತದೇ ಸೋಲಿನ ರುಚಿ (ಒಂದು ಮೂರು ಸೀಟು).

ಮಧ್ಯಪ್ರದೇಶದಲ್ಲೂ ಬಿಜೆಪಿ ಸ್ಟ್ರಾಂಗ್

ಮಧ್ಯಪ್ರದೇಶದಲ್ಲೂ ಬಿಜೆಪಿ ಸ್ಟ್ರಾಂಗ್

ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಪಕ್ಷವು ಸ್ಟ್ರಾಂಗ್ ಆಗಿದೆ. ಅಂದರೆ ಬಿಜೆಪಿಗೆ 24-28 ಖಚಿತ. ಕಾಂಗ್ರೆಸ್ಸಿಗೆ ಒಂದು ಮೂರು ಸೀಟು.

ಛತ್ತೀಸಗಢದಲ್ಲಿ ಬಿಜೆಪಿಗೆ ಉಘೇ ಉಘೇ?

ಛತ್ತೀಸಗಢದಲ್ಲಿ ಬಿಜೆಪಿಗೆ ಉಘೇ ಉಘೇ?

ನಕ್ಸಲರ ಹಾವಳಿಯಿಂದ ಗಢಗಢ ಅನ್ನುತ್ತಿರುವ ಛತ್ತೀಸಗಢದಲ್ಲಿ ಮತದಾರ ಬಿಜೆಪಿ ಪರ ಸದೃಢವಾಗಿ ನಿಂತಿದ್ದಾನೆ. ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೆ ವಿರುದ್ಧವಾಗಿ ಮತದಾರರು ಬಿಜೆಪಿಯನ್ನು ಥಂಡಾಗೊಳಿಸಿದ್ದರು. ಆದರೆ ಈ ಬಾರಿ ಯಾವುದೇ ಗೊಂದಲಗಳಿಗೆ ಎಡೆಯಿಲ್ಲದಂತೆ ಬಿಜೆಪಿಗೆ ಉಘೇ ಉಘೇ ಎಂದಿದ್ದಾನೆ ಇಲ್ಲಿನ ಮತದಾರ. ಬಿಜೆಪಿಗೆ ಶೇ. 50ಕ್ಕೂ ಹೆಚ್ಚು ಮತದಾರರ ಒಲವು ಸಿಕ್ಕಿದ್ದರೆ ಕಾಂಗ್ರೆಸ್ಸಿಗೆ ಕೇವಲ ಶೇ. 30 ಮಂದಿ ಜೈ ಅಂದಿದ್ದಾರೆ. ಹಾಗಾಗಿ ಇಲ್ಲಿಯೂ ಬಿಜೆಪಿ ಗಳಿಕೆ ಹೆಚ್ಚು ಹೆಚ್ಚು

ಆಮ್ ಆದ್ಮಿಗೂ ಮೂರು ಸ್ಥಾನ ಕೊಟ್ಟ CNN-IBN

ಆಮ್ ಆದ್ಮಿಗೂ ಮೂರು ಸ್ಥಾನ ಕೊಟ್ಟ CNN-IBN

ಎನ್ ಡಿಎ 270-282, ಯುಪಿಎ 92-102, ಟಿಎಂಸಿ 25-31, ಅಣ್ಣಾ ಡಿಎಂಕೆ22-28, ಎಡ ರಂಗ 14-20, ಎಸ್ಪಿ 13-17, ಬಿಜೆಡಿ12-16, ಬಿ ಎಸ್ಪಿ 10-14, ಟಿಆರ್ ಎಸ್ 8-12, ಡಿಎಂಕೆ 7-11, ಎಎಪಿ3-7.

ಒಟ್ಟಾರೆ ಬಿಜೆಪಿ- ಕಾಂಗ್ರೆಸ್ ಸಾಧನೆ ಹೀಗಿದೆ:

ಒಟ್ಟಾರೆ ಬಿಜೆಪಿ- ಕಾಂಗ್ರೆಸ್ ಸಾಧನೆ ಹೀಗಿದೆ:

ಎನ್ ಡಿಎ 270-282, ಯುಪಿಎ 92-102
ಬೆಜೆಪಿ 230-242, ಕಾಂಗ್ರೆಸ್ 72-82

ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧನೆ ಎಷ್ಟು?

ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧನೆ ಎಷ್ಟು?

ಕರ್ನಾಟಕದಲ್ಲಿ ಕಾಂಗ್ರೆಸ್ 12-16 ಸ್ಥಾನ, ಬಿಜೆಪಿಗೆ 10-14, ಜೆಡಿಎಸ್ 1-3
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ 11-14 ಸೀಟು

ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಷಗಳ ಸಾಧನೆ ಹೇಗಿದೆ?

ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಷಗಳ ಸಾಧನೆ ಹೇಗಿದೆ?

ಶಿವಸೇನಾ 2-16, ಟಿಡಿಪಿ 10-14, ಆರ್ ಜೆಡಿ 8-12, ತೃಣಮೂಲ ಕಾಂಗ್ರೆಸ್ 25-31, ಅಣ್ಣಾ ಡಿಎಂಕೆ 22-28, ಸಿಪಿಎಂ ಮೈತ್ರಿ 14-20, ಸಮಾಜವಾದಿ ಪಕ್ಷ 13-19, ಬಿಜು ಜನತಾದಳ 12-16, ಬಿಎಸ್ ಪಿ 10-14, ವೈಎಸ್ಆರ್ ಕಾಂಗ್ರೆಸ್ 11-15, ತೆಲಂಗಾಣ ರಾಷ್ಟ್ರೀಯ ಸಮಿತಿ 8-12, ಡಿಎಂಕೆ 7-11.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಿಜೆಪಿ ಹೇಗೆ?

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಿಜೆಪಿ ಹೇಗೆ?

ಉತ್ತರ ಪ್ರದೇಶ: ಬಿಜೆಪಿಗೆ 45-53, ಸಮಾಜವಾದಿ ಪಾರ್ಟಿಗೆ 13-17 ಸೀಟು, ಬಿಎಸ್ಪಿಗೆ 10-14
ಬಿಹಾರ: ಬಿಜೆಪಿಗೆ 21-27, ಕಾಂಗ್ರೆಸ್-ಆರ್ ಜೆಡಿಎ-ಎನ್ ಸಿಪಿ: 11-15, ಜೆಡಿಯು: 2-4.

ಆಂಧ್ರ ಪ್ರದೇಶದ ಸೀಮಾಂಧ್ರ ಮತ್ತು ತೆಲಂಗಾಣದಲ್ಲಿ?

ಆಂಧ್ರ ಪ್ರದೇಶದ ಸೀಮಾಂಧ್ರ ಮತ್ತು ತೆಲಂಗಾಣದಲ್ಲಿ?

ಸೀಮಾಂಧ್ರ:
ಟಿಡಿಪಿ -ಬಿಜೆಪಿ 11-15, ವೈಎಸ್ಸಾರ್ ಕಾಂಗ್ರೆಸ್ 11-15, ಕಾಂಗ್ರೆಸ್- ಜೀರೋ.
ತೆಲಂಗಾಣ:
ಟಿಆರ್ ಎಸ್ 8-12, ಕಾಂಗ್ರೆಸ್ 3-5, ಬಿಜೆಪಿ-ಟಿಡಿಪಿ 2-4.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+