ಬೆಳಗ್ಗೆಯಷ್ಟೇ ಟ್ವೀಟ್ ಮಾಡಿದ್ದ ಖ್ಯಾತ ಶಾಯರಿ ಬರಹಗಾರ ರಾಹತ್ ಇಂದೋರಿ ಸಾವು

ನವದೆಹಲಿ, ಆಗಸ್ಟ್‌ 11: ಕೊರೊನಾವೈರಸ್ ಪಾಸಿಟಿವ್ ಆಗಿ ಒಂದು ದಿನದ ಬಳಿಕ ಖ್ಯಾತ ಉರ್ದು ಶಾಯರಿ ಹಾಗೂ ಗಝಲ್ ಬರಹಗಾರ ರಾಹತ್ ಇಂದೋರಿ ತಮ್ಮ ಕೊನೆಯುಸಿರೆಳೆದಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಟ್ವೀಟ್ ಮಾಡಿದ್ದ ಅವರು ತಮ್ಮ ಅಭಿಮಾನಿಗಳಿಗೆ, ತಾವು ಕೊರೊನಾ ಸೊಂಕಿತರಾಗಿರುವುದಾಗಿ ಮಾಹಿತಿ ನೀಡಿದ್ದರು. ಆದರೆ,ಇಂದು ಸಂಜೆ 4 ಗಂಟೆಗೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಅವರನ್ನು ಇಂದೋರ್ ನ ಅರಬಿಂದೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

" ಕೋವಿಡ್‌ನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ನಿನ್ನೆ ನನ್ನನ್ನು ಕೊರೊನಾವೈರಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು ನನ್ನ ವರದಿ ಸಕಾರಾತ್ಮಕ ಹೊರಬಂದಿದೆ. ಪ್ರಸ್ತುತ ನಾನು ಅರಬಿಂದೋ ಆಸ್ಪತ್ರೆಗೆ ದಾಖಲಾಗಿದ್ದು, ಆದಷ್ಟು ಬೇಗ ರೋಗನ್ನು ಸೋಲಿಸಲು ನನಗಾಗಿ ಪ್ರಾರ್ಥಿಸಿ" ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದರು. ಆದರೆ ದುರದೃಷ್ಟವಶಾತ್ ಅವರು ಕೊನೆಯುಸಿರೆಳೆದಿದ್ದಾರೆ.

Poet Rahat Indori Dies Of Heart Attack Aftet Testing Positive For Covid-19

''ಹಿಂದಿನ ದಿನ ಇಂದೋರಿಗೆ ಎರಡು ಬಾರಿ ಹೃದಯಾಘಾತವಾಗಿತ್ತು ಮತ್ತು ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ'' ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ವಿನೋದ್ ಭಂಡಾರಿ ಹೇಳಿದ್ದಾರೆ.

70 ರ ಹರೆಯದ ಗೀತರಚನೆಕಾರ ರಾಹತ್ ಇಂದೋರಿ 'ಮುನ್ನಾ ಭಾಯ್ ಎಂ.ಬಿ.ಬಿ.ಎಸ್', 'ಮರ್ಡರ್' ಮತ್ತು ಇತರ ಬಾಲಿವುಡ್ ಚಲನಚಿತ್ರಗಳಿಗೆ ಹಲವಾರು ಹಾಡುಗಳ ಸಾಹಿತ್ಯವನ್ನು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+