PMO ಸಿಬ್ಬಂದಿ ಸಂಬಳ ವಿವರ ಬಹಿರಂಗ, ಕುಲ್ಬೆಗೆ ಅಧಿಕ ವೇತನ
ನವದೆಹಲಿ, ಆಗಸ್ಟ್ 08: ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆ ಹೆಚ್ಚಳದ ಸುದ್ದಿ ಓದಿರಬಹುದು. ಈ ಏರಿಕೆಯ ಪರಿಣಾಮ ಪ್ರಧಾನಿ ಸಚಿವಾಲಯದ ಸಿಬ್ಬಂದಿಯ ಸಂಬಳ ಕೂಡಾ ಮೇಲಕ್ಕೇರಿದೆ. ಮೋದಿಯವರ ಕಾರ್ಯದರ್ಶಿ ಭಾಸ್ಕರ್ ಕುಲ್ಬೆಅವರು ಪ್ರತಿ ತಿಂಗಳು 2 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ ಎಂದು ಆರ್ ಟಿಐ ಅರ್ಜಿಯ ಮೂಲಕ ತಿಳಿದು ಬಂದಿದೆ.[ಮಾಜಿ ಮುಖ್ಯಮಂತ್ರಿಗಳ ಪಿಂಚಣಿ ಶೇ 600ರಷ್ಟು ಏರಿಕೆ!]
ಪ್ರಧಾನಿ ಸಚಿವಾಲಯದ ಅಧಿಕಾರಿಗಳ ಪೈಕಿ ಭಾಸ್ಕರ್ ಅವರು ಅತಿ ಹೆಚ್ಚು ಸಂಬಳ ಪಡೆಯುವ ವ್ಯಕ್ತಿಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿರುವ ನೃಪೇಂದ್ರ ಮಿಶ್ರಾ ಮತ್ತು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿರುವ ಪಿಕೆ ಮಿಶ್ರಾ 1,62,500 ರು ಪ್ರತಿ ತಿಂಗಳು ಗಳಿಸುತ್ತಿದ್ದಾರೆ. [ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ನೆಮ್ಮದಿ ಜೀವನ]

ಬಹುತೇಕ ಎಲ್ಲಾ ಜಂಟಿ ಕಾರ್ಯದರ್ಶಿಗಳು ಸರಿ ಸುಮಾರು 1.70 ಲಕ್ಷ ರು. ಸಂಬಳ ಪಡೆಯುತ್ತಿದ್ದಾರೆ. ಅದರಲ್ಲೂ ತರುಣ್ ಬಜಾಜ್ ಅತಿ ಹೆಚ್ಚು 1,77,750 ರು ಪ್ರತಿ ತಿಂಗಳು ವೇತನ ಎಣಿಸುತ್ತಿದ್ದಾರೆ.[ಸರ್ಕಾರಿ ನೌಕರರಿಗೆ ಕಹಿ ಸುದ್ದಿ, ವೇತನ ಪರಿಷ್ಕರಣೆ ಸದ್ಯಕ್ಕಿಲ್ಲ]
ಜೂನ್ 1ರಂದು ಪ್ರಧಾನಿ ಸಚಿವಾಲಯದ ವೆಬ್ ಸೈಟ್ ನಲ್ಲಿ ಪ್ರಕಟಿತ ಮಾಹಿತಿಯಂತೆ 17,000 ರೂ. ಅತಿ ಕಡಿಮೆ ವೇತನವಾಗಿದೆ. ಸಿಬ್ಬಂದಿಗಳ ವೇತನ, ಭತ್ಯೆ ವಿವರಗಳನ್ನು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲೂ ಪ್ರಕಟಿಸಲಾಗುತ್ತಿದ್ದು, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಈ ವಿವರಗಳನ್ನು ಪಡೆಯಬಹುದಾಗಿದೆ. ಪ್ರಧಾನಿ, ಸಚಿವರುಗಳ ಸಂಬಳ ವಿವರ ಕೂಡಾ ಲಭ್ಯವಿರುತ್ತದೆ.












Click it and Unblock the Notifications