ರಾಹುಲ್ ಗಾಂಧಿ ಟ್ವೀಟ್‌ಗೆ ತಿರುಗೇಟು ನೀಡಿದ ಬಿಜೆಪಿ: ಫೋಟೊ ಹಿಂದಿನ ರಹಸ್ಯ ಬಯಲು

ಕೇಂದ್ರ ಸರ್ಕಾರ ಮಾಡಿದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದು, ದೆಹಲಿ ಚಲೋ ಎಂದು ಸಾಗುತ್ತಿದ್ದಾರೆ. ಅದೇ ಸಮಯದಲ್ಲಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಫೋಟೋವೊಂದನ್ನು ಟ್ವೀಟ್ ಮಾಡಿದ್ದು ರೈತರಿಗೆ ಬೆಂಬಲ ನೀಡುವುದರ ಜೊತೆಗೆ, ರೈತರನ್ನು ನಡೆಸಿಕೊಳ್ಳುವುದರ ಕುರಿತಾಗಿ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಶನಿವಾರ (ನವೆಂಬರ್ 28) ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ವೃದ್ಧ ರೈತನೊಬ್ಬನ ಮೇಲೆ ಯೋಧನು ಲಾಠಿ ಬೀಸುತ್ತಿರುವುದಾಗಿ ಕಂಡು ಬರುತ್ತಿದೆ. ಈ ಫೋಟೋ ಜೊತೆಗೆ ಶೀರ್ಷಿಕೆ ಬರೆದಿದ್ದ ರಾಹುಲ್ ಗಾಂಧಿ ''ತುಂಬಾ ದುಃಖದ ಫೋಟೋ. ನಮ್ಮ ಘೋಷಣೆ 'ಜೈ ಜವಾನ್ ಜೈ ಕಿಸಾನ್', ಆದರೆ ಇಂದು ಪ್ರಧಾನಿ ಮೋದಿ ಅವರ ದುರಹಂಕಾರದಿಂದಾಗಿ ಯೋಧನು ರೈತನ ವಿರುದ್ಧ ನಿಲ್ಲುವಂತೆ ಮಾಡಿತು. ಇದು ತುಂಬಾ ಅಪಾಯಕಾರಿ'' ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಲ್ವಿಯಾ ಕೂಡ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಪೋಸ್ಟ್ ಮಾಡಿರುವ ಫೋಟೋವಿನ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

PM Narendra Modis arrogance made jawans stand against farmers: Rahul Gandhi; BJP Hits back

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಮಿತ್ ಮಾಲ್ವಿಯಾ ''ರಾಹುಲ್ ಗಾಂಧಿ ಬಹಳ ಸಮಯದ ನಂತರ, ಭಾರತ ಕಂಡಂತಹ ಅತ್ಯಂತ ಕೆಟ್ಟ ವಿರೋಧ ಪಕ್ಷದ ನಾಯಕರಾಗಿರಬೇಕು' ಎಂದು ಬರೆದಿದ್ದಾರೆ.

ಅಮಿತ್ ಮಾಲ್ವಿಯಾ ಟ್ವೀಟ್‌ನಲ್ಲಿ ಎರಡು ಫೋಟೋಗಳನ್ನು ಕಾಣಬಹುದು. ಮೊದಲನೆಯದು ರಾಹುಲ್ ಗಾಂಧಿಯವರು ಪೋಸ್ಟ್‌ ಮಾಡಿದ ಫೋಟೋದಲ್ಲಿ ಯೋಧನು ರೈತನನ್ನು ಹೊಡೆಯುತ್ತಿರುವುದು ಕಾಣಬಹುದು. ಅದೇ ಸಮಯದಲ್ಲಿ ಯೋಧನ ಲಾಠಿಯು ರೈತನನ್ನು ಸಹ ಮುಟ್ಟಲಿಲ್ಲ ಎಂದು ಎರಡನೇ ಚಿತ್ರದಲ್ಲಿ ಕಂಡು ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+