ಪ್ರಧಾನಿ ಮೋದಿ ಜಗತ್ತಿನ ದುಬಾರಿ 'ಚೌಕಿದಾರ': ಕಪಿಲ್ ಸಿಬಲ್

ನವದೆಹಲಿ ಫೆಬ್ರವರಿ 24: "ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ದುಬಾರಿ ಚೌಕಿದಾರ" ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.

ನವದೆಹಲಿಯಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರಧಾನಿ ಮೋದಿಯವರೇ ಹೇಳಿದ್ದಾರೆ ತಾವೊಬ್ಬ ಚೌಕಿದಾರ(ವಾಚ್ ಮನ್) ಎಂದು. ಆದರೆ ಅವರಿಗೆ ಅರಿವಿಲ್ಲದೆ ಈ ಬ್ಯಾಂಕ್ ಅವ್ಯವಹಾರಗಳು ನಡೆಯುತ್ತಿರುವುದೇಕೆ? ನೀರವ್ ಮೋದಿಯಂಥವರು ಕೊಳ್ಳೆಹೊಡೆದು ಓಡಿಹೋಗುವಾಗ ಚೌಕಿದಾರ ಏನು ಮಾಡುತ್ತಿದ್ದರು?' ಎಂದು ಲೇವಡಿ ಮಾಡಿದ್ದಾರೆ.

ಓರಿಯಂಟಲ್ ಬ್ಯಾಂಕ್ ನಲ್ಲೂ ಇಂಥದೇ ಅವ್ಯವಹಾರ ನಡೆದಿದೆ ಎಂಬುದು ಈಗ ಬೆಳಕಿಗೆ ಬರುತ್ತಿದೆ. ಅವ್ಯವಹಾರದ ಕುರಿತು 2017 ಆಗಸ್ಟ್ ನಲ್ಲೇ ದೂರು ನೀದಿದ್ದರೂ, ನಿನ್ನೆ(ಫೆ.24)ಯಷ್ಟೇ ಎಫ್ ಐಆರ್ ದಾಖಲಿಸಿಕೊಂದಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

PM Modi world's costliest 'chowkidar': Congress

ವಜ್ರವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಮೂಲಕ ನಡೆಸಿದ ಸುಮಾರು 11 ಸಾವಿರ ಕೋಟಿ ರೂ. ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆಯೇ ಅವರು ವಿದೇಶಕ್ಕೆ ಹಾರಿದ್ದರು. ವಿಜಯ್ ಮಲ್ಯಾ, ಲಲಿತ್ ಮೋದಿಯವರ ಪಟ್ಟಿಗೆ ನೀರವ್ ಮೋದಿ ಹೊಸ ಸೇರ್ಪಡೆಯಾಗಿದ್ದು, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡುವುದಕ್ಕೆ ವಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿತ್ತು. ಇದೀಗ ಓರಿಯಂಟಲ್ ಬ್ಯಾಂಕ್ ನಲ್ಲೂ ಇಂಥದೇ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿತ್ತು. ಈ ಹಿನ್ನೆಲೆಯಲ್ಲ ನರೇಂದ್ರ ಮೋದಿಯವರ ವಿರುದ್ಧ ಕಪಿಲ್ ಸೀಬಲ್ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+