ಈ ಬಾರಿ ಸದಸ್ಯತ್ವ ನೋಂದಣಿ ಜೊತೆಗೆ ಬಿಜೆಪಿ ಮತ್ತೇನು ಮಾಡಲಿದೆ?

Recommended Video

      ಈ ಬಾರಿ ಸದಸ್ಯತ್ವ ನೋಂದಣಿ ಜೊತೆಗೆ ಬಿಜೆಪಿ ಮತ್ತೇನು ಮಾಡಲಿದೆ? | Oneindia Kannada

      ನವದೆಹಲಿ, ಜುಲೈ 3: ಎರಡನೇ ಹಂತದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ರೂಪ ನೀಡಿದ್ದಾರೆ.

      ಜುಲೈ 6 ರಂದು ವಾರಣಾಸಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿರುವ ಮೋದಿ ಸದಸ್ಯತ್ವ ನೋಂದಣಿ ಜೊತೆಗೆ ಗಿಡಗಳನ್ನು ನೆಡುವುದಾಗಿ ತಿಳಿಸಿದ್ದಾರೆ.

      ಸದಸ್ಯತ್ವ ನೋಂದಣಿ ಅವಧಿಯಲ್ಲಿ ಪ್ರತಿ ಮತಗಟ್ಟೆಯಲ್ಲೂ ಕನಿಷ್ಠ ತಲಾ ಐದು ಗಿಡಗಳನ್ನು ನೆಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಗಿಡಗಳನ್ನು ನೆಡುವುದರ ಜೊತೆಗೆ ರಕ್ಷಣೆಯನ್ನೂ ಕಾರ್ಯಕರ್ತರೇ ಮಾಡಬೇಕು ಎಂದು ಮೋದಿ ತಿಳಿಸಿದ್ದಾರೆ.

      PM Modi will kick start the BJP membership campaign

      ಬಿಜೆಪಿ ಎರಡನೇ ಹಂತದ ಸದಸ್ಯತ್ವ ಅಭಿಯಾನಕ್ಕೆ ಜುಲೈ 6 ರಂದು ಚಾಲನೆ ದೊರೆಯಲಿದೆ.ವಾರಣಾಸಿಯಲ್ಲಿ ಪ್ರಧಾನಿ ಮೋದಿ ಹಾಗೂ ತೆಲಂಗಾಣದ ಹೈದರಾಬಾದ್‌ನಲ್ಲಿ ಅಮಿತ್ ಷಾ ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಲಿದ್ದಾರೆ.

      ಎಲ್ಲಾ ಕೇಂದ್ರ ಸಚಿವರುಗಳು ಆಯಾ ರಾಜ್ಯಗಳಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

      ಮೊದಲ ಹಂತದ ಅಭಿಯಾನದಲ್ಲಿ 11 ಕೋಟಿಗೂ ಅಧಿಕ ಸದಸ್ಯರ ನೋಂದಣಿ ಮಾಡಿದ್ದ ಬಿಜೆಪಿ ಎರಡನೇ ಹಂತದಲ್ಲಿ ಎರಡೂವರೆ ಕೋಟಿಗೂ ಅಧಿಕ ಗಮನ ಕೇಂದ್ರೀಕರಿಸಿದೆ.

      ಸದಸ್ಯತ್ವ ನೋಂದಣಿ ಅಭಿಯಾನದ ಬಳಿಕ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಮಿತ್ ಷಾ ಕೆಳಗಿಳಿಯಲಿದ್ದು ನೂತನ ಅಧ್ಯಕ್ಷರ ಆಯ್ಕೆಯಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+