Get Updates
Get notified of breaking news, exclusive insights, and must-see stories!

ಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾ

Recommended Video

      ಶಿಕ್ಷಕರ ದಿನಾಚರಣೆಯಂದು ಬೆಂಗಳೂರು ಮೂಲದ ಶಿಕ್ಷಕಿಯನ್ನ ಹೊಗಳಿದ ಮೋದಿ | Oneindia Kannada

      ನವದೆಹಲಿ, ಸೆಪ್ಟೆಂಬರ್ 05: ಶೈಕ್ಷಣಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಬೆಂಗಳೂರಿನ ಶಿಕ್ಷಕಿ ಶೈಲಾ ಆರ್ ಎನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಬಾಯ್ತುಂಬ ಹೊಗಳಿದ್ದಾರೆ.

      "ಬೆಂಗಳೂರು ಉತ್ತರದಲ್ಲಿ ತಾವು ಕೆಲಸ ಮಾಡುತ್ತಿದ್ದ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಕು.ಶೈಲಾ ಆರ್ ಎನ್ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಸಾಕಷ್ಟು ವಿದ್ಯಾರ್ಥಿಗಳ ಬದುಕಿನಲ್ಲಿ ಧನಾತ್ಮಕ ಪ್ರಭಾವ ಬೀರಿದೆ. ಅದರಲ್ಲೂ ಬಡ ಕುಟುಂಬಕ್ಕೆ ಸೇರಿದ ಮಕ್ಕಳ ಮೇಲೆ ಅವರ ಪ್ರಭಾವ ಸಾಕಷ್ಟಿದೆ. ಇವರಂಥ ಶಿಕ್ಷಕರು ನಮ್ಮ ಹೆಮ್ಮೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

      ಶೈಕ್ಷಣಿಕ ಕ್ಷೇತ್ರದ ಅತ್ಯತ್ತಮ ಸಾಧನೆಗಾಗಿ ಶೈಲಾ ಅವರಿಗೆ ಈ ಬಾರಿಯ ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿಯೂ ಸಂದಿದೆ. 46 ವರ್ಷ ವಯಸ್ಸಿನ ಶೈಲಾ ಅವರು ಕಳೆದ 24 ವರ್ಷಗಳಿಂದ ಹಲವು ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯಕ್ಕೆ ಬೆಂಗಳೂರು ಉತ್ತರದ ಉಪನಿರ್ದೇಶಕರ ಕಚೇರಿಗೆ ವರ್ಗಾವಣೆಯಾಗಿರುವ ಅವರು ಶಿಕ್ಷಣ ಕ್ಷೇತ್ರಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ.

      PM Modi praises Bangaluru teacher Shaila R N on teachers day

      ಶಿಕ್ಷಕರ ದಿನವಾದ ಇಂದು(ಸೆ.5) ನಮ್ಮ ಕನ್ನಡದ ಶಿಕ್ಷಕಿಯನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದು ಹೆಮ್ಮೆಯೇ ತಾನೇ?

      ಶೈಲಾ ಅವರಷ್ಟೇ ಅಲ್ಲದೆ, ಕರ್ನಾಟಕದ ಡಾ. ಎಂ ಶಿವಕುಮಾರ್ ಮತ್ತು ಡಾ.ಜಿ ರಮೇಶಪ್ಪ ಎಂಬ ಮೂವರು ಶಿಕ್ಷಕರಿಗೂ ಈ ಸಾಲಿನ ರಾಷ್ಟ್ರ ಪ್ರಶಸ್ತಿ ಸಂದಿರುವುದು ಶ್ಲಾಘನೀಯ.

      ಶಿವಕುಮಾರ್ ಅವರು ಚಿಕ್ಕಬಳ್ಳಾಪುರದವರಾಗಿದ್ದು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಕ್ಲಿಷ್ಟಕರವಾದ ಗಣಿತವನ್ನು ಸುಲಭವಾಗಿ ಕಲಿಸುತ್ತಾರೆ.

      ಹಾಗೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾ.ಜಿ.ರಮೇಶಪ್ಪ ಅವರು ದೈಹಿಕ ಶಿಕ್ಷಕರಾಗಿದ್ದು, ಮಕಕಳಿಗೆ ಯೋಗ ಮತ್ತು ಕ್ರೀಡೆಯ ಮಹತ್ವ ತಿಳಿಸಿಕೊಡುತ್ತಿದ್ದಾರೆ. ಅವರಿಗೂ ಈ ಬಾರಿಯ ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಬಂದಿದೆ.

      ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆಯ ಮಂಜು ಬಾಲಸುಬ್ರಹ್ಮಣ್ಯಂ ಅವರು ದಿವ್ಯಾಂಗ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೂ ಈ ಪ್ರಶಸ್ತಿ ಲಭ್ಯವಾಗಿದ್ದು, ಮೋದಿಯವರು ಇವರನ್ನೂ ಶ್ಲಾಘಿಸಿದ್ದಾರೆ.

      {document1}

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+