ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ

ನವದೆಹಲಿ, ಏಪ್ರಿಲ್ 26: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಂಡಿತ್ ರಾಜನ್ ಮಿಶ್ರಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

"ಪಂಡಿತ್ ರಾಜನ್ ಮಿಶ್ರಾ ಅವರು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಯಾರೂ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಬನಾರಸ್ ಘರಾನಾ ಸಂಗೀತದೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಮಿಶ್ರಾ ಜೀ ಅವರ ನಿರ್ಗಮನದಿಂದ ಕಲೆ ಮತ್ತು ಸಂಗೀತ ಲೋಕಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. ಈ ಕ್ಷಣದ ದುಃಖದಲ್ಲಿ ಮಿಶ್ರಾ ಜೀ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೋವು ಸಹಿಸುವ ಶಕ್ತಿ ನೀಡಲಿ" ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಶಾಸ್ತ್ರೀಯ ಗಾಯಕ ರಾಜನ್ ಮಿಶ್ರಾ ಅವರು ಕೋವಿಡ್ 19 ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯಲ್ಲಿ ಸೈಂಟ್ ಸ್ಟೀಫನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 70 ವರ್ಷ ವಯಸ್ಸಿನ ರಾಜನ್ ಅವರು ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಹೃದಯಾಘಾತಕ್ಕೆ ಒಳಗಾಗಿದ್ದ ರಾಜನ್ ಅವರಿಗೆ ವೆಂಟಿಲೇಟರ್ ಒದಗಿಸುವಷ್ಟರಲ್ಲಿ ಇನ್ನೊಮ್ಮೆ ಹೃದಯ ಸ್ತಂಭನವಾಗಿ ಭಾನುವಾರ ಸಂಜೆ ಮೃತಪಟ್ಟರು ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

PM condoles the demise of Pandit Rajan Mishra

ಬನಾರಸ್ ಘರಾನಾದ ಪಂಡಿತ್ ರಾಜನ್ ಮಿಶ್ರಾ ಅವರು ತಂದೆ ಹನುಮಾನ್ ಪ್ರಸಾದ್ ಮಿಶ್ರಾ ಅವರಿಂದಲೇ ಸಂಗೀತದ ಮೊದಲ ಪಾಠ ಕಲಿತರು. ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗಾಂಧರ್ವ ಪ್ರಶಸ್ತಿ ಪುರಸ್ಕೃತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+