PF ಪೋರ್ಟಲ್ ಹ್ಯಾಕ್: 2.7 ಕೋಟಿ ಉದ್ಯೋಗಿಗಳ ವಿವರಕ್ಕೆ ಕನ್ನ?!

ನವದೆಹಲಿ, ಮೇ 03: ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ ಒ) ಸಂಸ್ಥೆಯ ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದ್ದು ಸುಮಾರು 2.7 ಕೋಟಿ ಸದಸ್ಯರ ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದ ಮಾಹಿತಿಗೆ ಕನ್ನಹಾಕಲಾಗಿದೆ ಎಂಬ ಆಘಾತಕಾರಿ ವರದಿಯನ್ನು ವೃತ್ತ ಪತ್ರಿಕೆಯೊಂದು ಪ್ರಕಟಿಸಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ, ಕೇಂದ್ರ ಉದ್ಯೋಗಿಗಳ ಭವಿಷ್ಯ ನಿಧಿ ಆಯುಕ್ತರು ಬರೆದ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಪೋರ್ಟಲ್ ಗೆ ಸಾಕಷ್ಟು ಉದ್ಯೋಗಿಗಳ ಆಧಾರ್ ವಿವರಗಳನ್ನು ಜೋಡಿಸಲಾಗಿತ್ತು. ಹ್ಯಾಕ್ ಸುದ್ದಿ ತಿಳಿಯುತ್ತಿದ್ದಂತೆಯೇ aadhaar.epfoservices.com ವೆಬ್ ಸೈಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಪತ್ರದಲ್ಲಿ ಕೋರಲಾಗಿದೆ. ಅಂತೆಯೇ ವೆಬ್ ಪೋರ್ಟಲ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಇದರಲ್ಲಿರುವ ದೌರ್ನಬಲ್ಯಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವರದಿ ಹೇಳಿದೆ.

PF Portal Hacked, 2.7 Crore People Face Data Theft

ಪ್ರತಿಯೊಬ್ಬ ವ್ಯಕ್ತಿಯ ಸಂಬಳದ ಶೇ.12 ರಷ್ಟನ್ನು ಪಿಎಫ್ ಖಾತೆಗೆ ಜಮಾ ಮಾಡುವುದರಿಂದ ವ್ಯಕ್ತಿಯ ವೇತನದ ವಿವರವನ್ನೂ ಈ ಮೂಲಕ ಕದಿಯಬಹುದಾಗಿದೆ ಎಂದೂ ವರದಿ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+